ADVERTISEMENT

ಕೇಜ್ರಿವಾಲ್ ಫೋನ್‌ನಿಂದ 'ಚುನಾವಣಾ ತಂತ್ರ'ದ ಮಾಹಿತಿ ಪಡೆಯಲು ಇ.ಡಿ ಯತ್ನ: ಅತಿಶಿ

ಪಿಟಿಐ
Published 29 ಮಾರ್ಚ್ 2024, 6:12 IST
Last Updated 29 ಮಾರ್ಚ್ 2024, 6:12 IST
<div class="paragraphs"><p>ಅತಿಶಿ</p></div>

ಅತಿಶಿ

   

(ಪಿಟಿಐ ಚಿತ್ರ)

ನವದೆಹಲಿ: ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇ.ಡಿ) ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕೆಲಸ ಮಾಡುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೊಬೈಲ್ ಫೋನ್ ಮೂಲಕ ಆಮ್ ಆದ್ಮಿ ಪಕ್ಷದ (ಎಎಪಿ) ಲೋಕಸಭಾ ಚುನಾವಣಾ ತಂತ್ರಗಾರಿಕೆಯ ವಿವರಗಳನ್ನು ಪಡೆಯಲು ಬಯಸುತ್ತಿದೆ ಎಂದು ದೆಹಲಿ ಸಚಿವೆ ಅತಿಶಿ ಶುಕ್ರವಾರ ಆರೋಪಿಸಿದ್ದಾರೆ.

ADVERTISEMENT

'ನಿಜ ಹೇಳಬೇಕೆಂದರೆ ಇ.ಡಿ ಅಲ್ಲ, ಕೇಜ್ರಿವಾಲ್ ಫೋನಲ್ಲಿ ಏನಿದೆ ಎಂಬುದನ್ನು ತಿಳಿಯಲು ಬಿಜೆಪಿಯು ಬಯಸುತ್ತಿದೆ' ಎಂದು ಅವರು ದೂರಿದ್ದಾರೆ.

ಮಾರ್ಚ್ 21ರಂದು ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ ಕೇಜ್ರಿವಾಲ್‌ ಅವರನ್ನು ಇ.ಡಿ ವಶಕ್ಕೆ ನೀಡಲಾಗಿದ್ದ ಅವಧಿಯನ್ನು ನ್ಯಾಯಾಲಯವು ಏಪ್ರಿಲ್‌ 1ರವರೆಗೆ ವಿಸ್ತರಿಸಿದೆ.

'ಕೇಜ್ರಿವಾಲ್ ಅವರ ಮೊಬೈಲ್ ಫೋನ್ ಪರಿಶೀಲಿಸಲು ಇ.ಡಿ ಒತ್ತಾಯಿಸುತ್ತಿದೆ. ಆದರೆ 2021-22ರಲ್ಲಿ ಅಬಕಾರಿ ನೀತಿ ಜಾರಿಗೆ ಬಂದಿದ್ದಾಗ ಅವರ ಬಳಿ ಈ ಫೋನ್ ಇರಲಿಲ್ಲ. ಇದು ಕೆಲವೇ ತಿಂಗಳು ಹಳೆಯದ್ದು. ಇದರಿಂದ ಇ.ಡಿ, ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕೆಲಸ ಮಾಡುತ್ತಿದೆ ಎಂಬುದು ಸಾಬೀತುಗೊಂಡಿದೆ' ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

'ಆ ಅವಧಿಯಲ್ಲಿ ಕೇಜ್ರಿವಾಲ್ ಬಳಸಿದ್ದ ಫೋನ್ ಲಭ್ಯವಿಲ್ಲ ಎಂದು ಇ.ಡಿ ಹೇಳಿದೆ. ಈಗ ಹೊಸ ಫೋನಿನ ಪಾಸ್‌ವರ್ಡ್ ಬೇಕು ಎಂದು ಹೇಳುತ್ತಿದೆ' ಎಂದು ಅವರು ಹೇಳಿದ್ದಾರೆ.

'ಎಎಪಿಯ ಲೋಕಸಭಾ ಚುನಾವಣಾ ರಣನೀತಿ, ಪ್ರಚಾರ ಯೋಜನೆ, 'ಇಂಡಿಯಾ' ಮೈತ್ರಿಕೂಟದೊಂದಿಗಿನ ಮಾತುಕತೆ, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ತಂತ್ರಗಾರಿಕೆಯ ಬಗ್ಗೆ ವಿವರವನ್ನು ಪಡೆಯಲು ಕೇಜ್ರಿವಾಲ್ ಫೋನ್ ಪಡೆಯಲು ಇ.ಡಿ ಬಯಸುತ್ತಿದೆ' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.