ADVERTISEMENT

ಪ್ರತಿ ವರ್ಷ ಪಠ್ಯಪುಸ್ತಕ ಪರಿಷ್ಕರಿಸಿ: ಶಿಕ್ಷಣ ಸಚಿವಾಲಯ

ಪಿಟಿಐ
Published 29 ಏಪ್ರಿಲ್ 2024, 15:39 IST
Last Updated 29 ಏಪ್ರಿಲ್ 2024, 15:39 IST
   

ನವದೆಹಲಿ: ಪಠ್ಯ ಪುಸ್ತಕಗಳನ್ನು ಪರಿಶೀಲಿಸುವಂತೆ ಮತ್ತು ಪ್ರತಿ ವರ್ಷ ಅವುಗಳನ್ನು ಪರಿಷ್ಕರಿಸುವಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿಗೆ (ಎನ್‌ಸಿಇಆರ್‌ಟಿ) ಶಿಕ್ಷಣ ಸಚಿವಾಲಯ ತಿಳಿಸಿದೆ.

ಒಂದು ಬಾರಿ ಮುದ್ರಣವಾದ ಪಠ್ಯಪುಸ್ತಕಗಳನ್ನು ಹಲವು ವರ್ಷ ಉಳಿಸಿಕೊಳ್ಳಬಾರದು. ಜಗತ್ತು ವೇಗವಾಗಿ ಬದಲಾಗುತ್ತಿದೆ. ಹೀಗಾಗಿ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವುದು ಅತ್ಯಗತ್ಯ. ಪ್ರತಿ ಶೈಕ್ಷಣಿಕ ವರ್ಷ ಆರಂಭದಲ್ಲಿ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಬೇಕು. ಉದಾಹರಣೆಗೆ ಕೃತಕ ಬುದ್ಧಿಮತ್ತೆ(ಎಐ) ವಿಷಯಗಳನ್ನು ಸೇರಿಸಬಹುದು. ಎಂದು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

‘ಪ್ರತಿ ವರ್ಷ ಮುದ್ರಣಕ್ಕೆ ಕಳುಹಿಸುವ ಮೊದಲು ಪಠ್ಯಪುಸ್ತಕಗಳನ್ನು ಪರಿಶೀಲಿಸಬೇಕು. ಬದಲಾವಣೆಗಳಿದ್ದರೆ ಸರಿಪಡಿಸಬೇಕು ಅಥವಾ ಹೊಸ ಅಂಶಗಳನ್ನು ಅಗತ್ಯವಿದ್ದರೆ ಸೇರಿಸಬೇಕು’ ಎಂದು ತಿಳಿಸಿವೆ.

ADVERTISEMENT

ಎನ್‌ಸಿಇಆರ್‌ಟಿ ಸದ್ಯ ನೂತನ ಪಠ್ಯಕ್ರಮ ಚೌಕಟ್ಟಿನ ಅನುಸಾರ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಿದೆ. ಈ ಪುಸ್ತಕಗಳು 2026ರ ವೇಳೆಗೆ ಎಲ್ಲ ತರಗತಿಗಳಿಗೆ ಲಭ್ಯವಾಗಲಿವೆ ಎಂದು ತಿಳಿಸಿವೆ.

 ಪ್ರಸಕ್ತ ವರ್ಷ ಮೂರು ಮತ್ತು ಆರನೇ ತರಗತಿಗಳಿಗೆ ನೂತನ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.