ADVERTISEMENT

Eid-Al-Fitr ಕೇರಳ, ಲೇಹ್, ಲಡಾಖ್‌ನಲ್ಲಿ ಬುಧವಾರ ಈದ್: ಉಳಿದೆಡೆ ಗುರುವಾರ

ಪಿಟಿಐ
Published 9 ಏಪ್ರಿಲ್ 2024, 16:17 IST
Last Updated 9 ಏಪ್ರಿಲ್ 2024, 16:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕೇರಳ ಹಾಗೂ ಲಡಾಖ್‌ನಲ್ಲಿ ಬುಧವಾರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಗುರುವಾರ ಈದ್–ಉಲ್–ಫಿತ್ರ್ ಹಬ್ಬವನ್ನು ಆಚರಿಸಲಾಗುತ್ತದೆ.

ಚಂದ್ರದರ್ಶನ ಆಗದಿರುವುದರಿಂದ ರಾಯೆತ್–ಎ–ಇಲಾಲ್ ಸಮಿತಿ ಗುರುವಾರ ಈದ್ ಆಚರಿಸಲು ನಿರ್ಧರಿಸಲಾಗಿದೆ ಎಂದು ದೆಹಲಿಯ ಫತೇಪುರಿ ಮಸೀದಿಯ ಇಮಾಂ ತಿಳಿಸಿದ್ದಾರೆ. ಬುಧವಾರ ರಂಜಾನ್ ಮಾಸದ 30ನೇ ವೃತಾನುಷ್ಠಾನ ಮಾಡಲಾಗುವುದು ಎಂದರು.

ADVERTISEMENT

ಕೇರಳ, ಲೇಹ್ ಹಾಗೂ ಕಾರ್ಗಿಲ್‌ನಲ್ಲಿ ಬುಧವಾರ ಈದ್ ಆಚರಿಸಲಾಗುತ್ತದೆ.

ಮಂಗಳವಾರ ಸಂಜೆ ಶವ್ವಾಲ್ 1ರ ಚಂದ್ರದರ್ಶನವಾಗಿದ್ದರಿಂದ ಬುಧವಾರ ಈದ್ ಆಚರಿಸಲಾಗುತ್ತದೆ ಎಂದು ಕೇರಳದ ಮುಸ್ಲಿಂ ವಿದ್ವಾಂಸರಾದ ಸಯ್ಯಿದ್ ಸಾದಿಖ್ ಅಲಿ ಶಿಹಾಬ್ ತಂಙಲ್, ಜಿಫ್ರಿ ಮುತ್ತುಕೋಯ ತಂಙಳ್, ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.

ಚಂದ್ರ ದರ್ಶನವಾದ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಗುರುವಾರ ಈದ್ ಆಚರಿಸಲಾಗುತ್ತದೆ ಎಂದು ದೆಹಲಿಯ ಶಾಹಿ ಜಾಮಿಯ ಮಸೀದಿಯ ಮಾಜಿ ಮುಖ್ಯಸ್ಥ ಸಯ್ಯದ್ ಅಹಮದ್ ಬುಖಾರಿ ತಿಳಿಸಿದರು.

ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಬಿಹಾರದವರನ್ನೂ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಚಂದ್ರದರ್ಶನವಾದ ಯಾವುದೇ ಮಾಹಿತಿ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.