ADVERTISEMENT

ಕೋವಿಡ್‌ ಹರಡುವಿಕೆ, ನಿರ್ವಹಣೆ ಕುರಿತ ಸಂಶೋಧನೆಗೆ ಭಾರತ–ಅಮೆರಿಕದ 8 ತಂಡಗಳ ಆಯ್ಕೆ

ಕೋವಿಡ್ 19: ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ

ಪಿಟಿಐ
Published 18 ಆಗಸ್ಟ್ 2020, 8:55 IST
Last Updated 18 ಆಗಸ್ಟ್ 2020, 8:55 IST
ಲ್ಯಾಬ್‌ವೊಂದರ ಪ್ರಾತಿನಿಧಿಕ ಚಿತ್ರ
ಲ್ಯಾಬ್‌ವೊಂದರ ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೋವಿಡ್‌ 19 ರೋಗ ಹರಡುವ ಮತ್ತು ರೋಗ ನಿರ್ವಹಣೆಗೆ ಸಂಬಂಧಿಸಿದಂತೆ ಉನ್ನತಮಟ್ಟದ ಸಂಶೋಧನೆ ನಡೆಸುವುದಕ್ಕಾಗಿ ಭಾರತ ಮತ್ತು ಅಮೆರಿಕ ರಾಷ್ಟಗಳ ಸಂಶೋಧಕರನ್ನೊಳಗೊಂಡ ಎಂಟು ತಂಡಗಳನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆಯಾಗಿರುವ ಸಂಶೋಧನಾ ತಂಡಗಳ ಸದಸ್ಯರು, ಸೋಂಕು ನಿಗ್ರಹ, ರೋಗ ನಿರೋಧಕಶಕ್ತಿಯ ವ್ಯತ್ಯಾಸ, ತ್ಯಾಜ್ಯ ನೀರಿನಲ್ಲಿ ಸಾರ್ಸ್‌ ಕೋವ್‌ –2 ವೈರಸ್‌ಗಳನ್ನು ಗುರುತಿಸುವುದು, ರೋಗ ಪತ್ತೆಯ ಕಾರ್ಯವಿಧಾನಗಳು, ರಿವರ್ಸ್ ಜೆನಿಟಿಕ್ಸ್‌ ಕಾರ್ಯತಂತ್ರಗಳು ಮತ್ತು ಔಷಧ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತ–ಅಮೆರಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಒಕ್ಕೂಟ ಸಂಶೋಧನಾ ತಂಡವನ್ನು ಆಯ್ಕೆ ಮಾಡಿದೆ. ಇದು ಭಾರತ–ಅಮೆರಿಕ ಸರ್ಕಾರಗಳ ಜಂಟಿ ಹಣಕಾಸು ನೆರವಿನೊಂದಿಗೆ ನಡೆಯುವ ಸ್ವಾಯತ್ತ ದ್ವಿಪಕ್ಷೀಯ ಸಂಸ್ಥೆಯಾಗಿದೆ. ಈ ಒಕ್ಕೂಟ, ಸರ್ಕಾರ, ಅಕಾಡೆಮಿಕ್ ಮತ್ತು ಉದ್ಯಮ ಕ್ಷೇತ್ರಗಳ ನಡುವೆ ಸಂವಾದ ನಡೆಸುವ ಮೂಲಕವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಸಂಶೋಧನೆಗಳನ್ನು ಉತ್ತೇಜಿಸುತ್ತದೆ.

ADVERTISEMENT

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಮತ್ತು ಅಮೆರಿಕದ ವಿವಿಧ ಇಲಾಖೆಗಳು ನೋಡಲ್ ಏಜೆನ್ಸಿಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.