ADVERTISEMENT

40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದವನಿಗೆ ಒಲಿಯಿತು ₹5 ಕೋಟಿ ಬಹುಮಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 3:14 IST
Last Updated 20 ಜನವರಿ 2023, 3:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಂಡೀಗಢ: 35-40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಪಂಜಾಬ್‌ನ 88 ವರ್ಷದ ವೃದ್ಧನಿಗೆ ಕೊನೆಗೂ ಅದೃಷ್ಟ ಲಕ್ಷ್ಮಿ ಒಲಿದಿದ್ದು, ₹ 5 ಕೋಟಿ ಬಹುಮಾನ ಗೆದ್ದಿದ್ದಾರೆ.

ಜನವರಿ 16ರಂದು, ಪಂಜಾಬ್ ರಾಜ್ಯ ಮಕರ ಸಂಕ್ರಾಂತಿ ಲಾಟರಿ ಫಲಿತಾಂಶ ಬಂದಿದ್ದು, 88 ವರ್ಷದ ಮಹಾಂತ್ ದ್ವಾರಕ ದಾಸ್ ಅವರಿಗೆ ₹5 ಕೋಟಿಯ ಮೊದಲ ಬಹುಮಾನ ಬಂದಿದೆ. ಶೇಕಡ 30ರಷ್ಟು ತೆರಿಗೆ ಕಡಿತದ ಬಳಿಕ ಅವರಿಗೆ ಹಣ ನೀಡಲಾಗುತ್ತದೆ ಎಂದು ಲಾಟರಿ ನಿರ್ವಹಣೆಯ ಸಹ ನಿರ್ದೇಶಕ ಕರಮ್ ಸಿಂಗ್ ತಿಳಿಸಿದ್ದಾರೆ.

'ನನಗೆ ಸಂತೋಷವಾಗುತ್ತಿದೆ. ನಾನು ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದೇನೆ. ನಾನು ಗೆದ್ದ ಹಣವನ್ನು ನನ್ನ ಇಬ್ಬರೂ ಗಂಡುಮಕ್ಕಳಿಗೆ ಮತ್ತು ನನ್ನ 'ಡೇರಾ'ಗೆ ನೀಡುತ್ತೇನೆ’ ಎಂದು ಮಹಾಂತ್ ದ್ವಾರಕ ದಾಸ್ ಹೇಳಿದ್ದಾರೆ.

ADVERTISEMENT

ನನ್ನ ತಂದೆ, ಸೋದರ ಸಂಬಂಧಿಯೊಬ್ಬರಿಗೆ ಹಣ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಈಗ ಅದಕ್ಕೆ ಬಹುಮಾನ ಬಂದಿದೆ ಎಂದು ಅವರ ಮಗ ನರೇಂದ್ರ ಕುಮಾರ್ ಶರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.