ADVERTISEMENT

ಮತಗಟ್ಟೆಗಳಲ್ಲಿ ತಂಬಾಕು ಸೇವನೆ ನಿಷೇಧ: ಚುನಾವಣಾ ಆಯೋಗ ಆದೇಶ

ಪಿಟಿಐ
Published 26 ಡಿಸೆಂಬರ್ 2018, 20:22 IST
Last Updated 26 ಡಿಸೆಂಬರ್ 2018, 20:22 IST
   

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಯನ್ನು ಚುನಾವಣಾ ಆಯೋಗ ನಿಷೇಧಿಸಿದೆ.

ಇದೇ ಪ್ರಥಮ ಬಾರಿ ಆಯೋಗ ಈ ಕ್ರಮ ಕೈಗೊಂಡಿದೆ.

‘ದೇಶದಲ್ಲಿನ ಎಲ್ಲ ಮತಗಟ್ಟೆಗಳು ತಂಬಾಕು ಮುಕ್ತವಾಗಿರಬೇಕು. ಇದು ಧೂಮಪಾನ ನಿಷೇಧಕ್ಕೆ ಸೀಮಿತವಾಗಿಲ್ಲ. ಬೀಡಿ, ಸಿಗರೇಟು, ಗುಟ್ಕಾ ಹಾಗೂ ಜಗಿಯುವ ತಂಬಾಕನ್ನು ಸಹ ಮತಗಟ್ಟೆಯಲ್ಲಿ ನಿಷೇಧಿಸಲಾಗಿದೆ‍’ ಎಂದು ತಿಳಿಸಿದೆ.

ADVERTISEMENT

ಈ ಬಗ್ಗೆ ಮತದಾರರಿಗೆ ಅರಿವು ಮೂಡಿಸಲು ಪ್ರತಿಯೊಂದು ಮತಗಟ್ಟೆಯಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯುಕ್ತರಿಗೆ ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.