ಬೆಂಗಳೂರು: ಪೂರ್ವ ಶ್ರೀಲಂಕಾದ ತ್ಯಾಜ್ಯ ರಾಶಿಯಲ್ಲಿ ಪ್ಲಾಸ್ಟಿಕ್ ತಿಂದು ಸಾವಿಗೀಡಾದಆನೆಯ ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಫೋಟೊ ಪೋಸ್ಟ್ ಮಾಡಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯ ತಿಂದ ಬಳಿಕ ಶ್ರೀಲಂಕಾದಲ್ಲಿ ಮತ್ತೆರಡು ಆನೆಗಳು ಮೃತಪಟ್ಟಿವೆ. ಈ ಚಿತ್ರ ನೋಡಿದರೆ ಹೇಗೆ ಪ್ಲಾಸ್ಟಿಕ್ ವನ್ಯಜೀವಿಗಳನ್ನು ಕೊಲ್ಲುತ್ತಿದೆ ಎನ್ನುವುದು ತಿಳಿಯುತ್ತದೆ. ಕೊಲಂಬೊದಿಂದ 130 ಮೈಲುಗಳಷ್ಟು ದೂರದ ಪಲ್ಲಕಾಡು ಜಿಲ್ಲೆಯಲ್ಲಿನ ತ್ಯಾಜ್ಯದ ರಾಶಿಯಲ್ಲಿ ಇರುವ ಆನೆಯ ಫೋಟೊ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ 20 ಆನೆಗಳು ಶ್ರೀಲಂಕಾದಲ್ಲಿ ಪ್ಲಾಸ್ಟಿಕ್ ತಿಂದು ಮೃತಪಟ್ಟಿವೆ ಎಂದು ವರದಿಗಳು ಹೇಳಿವೆ.
ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಹೊಟ್ಟೆಯಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್, ಮಣ್ಣಿನಲ್ಲಿ ಕರಗದ ವಿವಿಧ ಸರಕುಗಳು ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.