ADVERTISEMENT

ದೆಹಲಿ ಮಳೆಗೆ 11 ಸಾವು: ವಿಮಾನ ಸಂಚಾರದಲ್ಲಿ ವ್ಯತ್ಯಯ

ರಾಯಿಟರ್ಸ್
Published 30 ಜೂನ್ 2024, 13:54 IST
Last Updated 30 ಜೂನ್ 2024, 13:54 IST
<div class="paragraphs"><p>ದೆಹಲಿಯಲ್ಲಿ ಮಳೆಗೆ ಜಲಾವೃತಗೊಂಡ ರಸ್ತೆಯಲ್ಲೇ ಕಾರುಗಳು ಸಾಗಿದವು</p></div>

ದೆಹಲಿಯಲ್ಲಿ ಮಳೆಗೆ ಜಲಾವೃತಗೊಂಡ ರಸ್ತೆಯಲ್ಲೇ ಕಾರುಗಳು ಸಾಗಿದವು

   

– ಪಿಟಿಐ ಚಿತ್ರ

ನವದೆಹಲಿ: ಕಳೆದೊಂದು ವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಮಳೆಯಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.

ADVERTISEMENT

ಈ ತಿಂಗಳಾರಂಭದಲ್ಲಿ ದಾಖಲೆ ಪ್ರಮಾಣದ ಉಷ್ಣಗಾಳಿಗೆ ಸಾಕ್ಷಿಯಾಗಿದ್ದ ದೆಹಲಿಯಲ್ಲಿ, ಜೂನ್‌ 28ರಂದು ದಶಕದಲ್ಲೇ ಅತೀ ಹೆಚ್ಚು ಮಳೆಯಾಗಿತ್ತು.

ದೆಹಲಿ ಏರ್‌ಪೋರ್ಟ್‌ ಟರ್ಮಿನಲ್‌–1ರ ಚಾವಣಿ ಕುಸಿದಿತ್ತು. ಇದರಿಂದ ವಿಮಾನಗಳ ಹಾರಾಟ ವ್ಯತ್ಯಯ ಉಂಟಾಗಿದೆ. ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡಿತ್ತು. ಟ್ರಾಫಿಕ್ ಜಾಮ್‌, ವಿದ್ಯುತ್‌ ಹಾಗೂ ನೀರಿನ ಪೂರೈಕೆಯಲ್ಲಿ ಏರುಪೇರಾಗಿದೆ.

ಕಳೆದ 24 ಗಂಟೆಯಲ್ಲಿ 60 ವಿಮಾನಗಳ ಹಾರಾಟ ರದ್ದಾಗಿವೆ. ಭಾನುವಾರ ವಿಮಾನಗಳ ಕಾರ್ಯಾಚರಣೆ ಎಂದಿನಂತೆ ಇತ್ತು. ವಿಮಾನಗಳು ಉಳಿದ ಎರಡು ಟರ್ಮಿನಲ್‌ಗಳಿಂದ ಹಾರಾಟ ನಡೆಸಿವೆ. ಆದರೆ ಕೆಲವು ವಿಮಾನಗಳ ಸೇವೆ ರದ್ದಾಗುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ದೆಹಲಿ ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಮಿನಲ್–1 ಈಗ ಸ್ಥ‌ಗಿತಗೊಂಡಿದೆ. ಈ ಟರ್ಮಿನಲ್‌ನಿಂದ ಕಡಿಮೆ ವೆಚ್ಚದ ಪ್ರಯಾಣ ಕಲ್ಪಿಸುವ ಇಂಡಿಗೊ ಹಾಗೂ ಸ್ಪೈಸ್‌ಜೆಟ್‌ ವಿಮಾನಗಳು ಕಾರ್ಯಾಚರಿಸುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.