ಮುಂಬೈ: ಎಲ್ಗರ್ ಪರಿಷತ್– ಮಾವೋವಾದಿಗಳ ಜೊತೆಗಿನ ಸಂಪರ್ಕ ಪ್ರಕರಣದಲ್ಲಿ ಆರೋಪಿಗಳಾಗಿದ್ದ ವೆರ್ನನ್ ಗೋನ್ಸಾಲ್ವೇಸ್ ಮತ್ತು ಅರುಣ್ ಫೆರೀರಾ ಅವರಿಗೆ ಕೊನೆಗೂ ಬಿಡುಗಡೆ ಭಾಗ್ಯ ದೊರೆತಿದೆ.
ಒಂದು ವಾರದ ಹಿಂದಷ್ಟೇ ಇವರಿಬ್ಬರ ಜಾಮೀನು ಅರ್ಜಿ ಮಂಜೂರು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಇದೀಗ ವಿಶೇಷ ನ್ಯಾಯಾಲಯ ಇಬ್ಬರನ್ನು ದೋಷ ಮುಕ್ತಗೊಳಿಸಿ ಬಿಡುಗಡೆ ಆದೇಶ ಹೊರಡಿಸಿದೆ.
ಪ್ರಕರಣದಲ್ಲಿ ವೆರ್ನನ್ ಗೋನ್ಸಾಲ್ವೇಸ್ ಮತ್ತು ಅರುಣ್ ಫೆರೀರಾ 5 ವರ್ಷ ಜೈಲು ವಾಸ ಅನುಭವಿಸಿದ್ದರು. ಇಂದು ಸಂಜೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಗೋನ್ಸಾಲ್ವೇಸ್ ಮತ್ತು ಅರುಣ್ ಪರ ವಕೀಲರು ತಿಳಿಸಿದ್ದಾರೆ.
ಏನಿದು ಪ್ರಕರಣ:
2017ರ ಡಿಸೆಂಬರ್ 31ರಂದು ಪುಣೆಯಲ್ಲಿ ಎಲ್ಗಾರ್ ಪರಿಷತ್ ಸಭೆಗೆ ನಡೆದಿದ್ದು, ಈ ಸಭೆಗೆ ಮಾವೋವಾದಿಗಳು ಹಣಕಾಸು ನೆರವು ನೀಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಸಭೆಯಲ್ಲಿ ಮಾಡಲಾಗಿದ್ದ ಪ್ರಚೋದನಕಾರಿ ಭಾಷಣದಿಂದಾಗಿ ಭೀಮಾ–ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಮಾರನೆ ದಿನ ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು ಎಂದೂ ಅವರು ತಿಳಿಸಿದ್ದರು.
ಎಲ್ಗರ್ ಪರಿಷತ್ ಸಂಸ್ಥೆಯ ಹಣಕಾಸು ನಿರ್ವಹಣೆಯಲ್ಲಿ ಗೋನ್ಸಾಲ್ವೇಸ್ ಮತ್ತು ಫೆರೀರಾ ಪ್ರಮುಖ ಪಾತ್ರ ವಹಿಸಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಕ್ಕೆ ಸಂಬಂಧಿಸಿದಂತೆ 2018ರಲ್ಲಿ ಇವರಿಬ್ಬರನ್ನು ಬಂಧಿಸಿಲಾಗಿತ್ತು.
ಓದಿ : ಎಲ್ಗಾರ್ ಪರಿಷತ್ ಪ್ರಕರಣ: ಇಬ್ಬರು ಹೋರಾಟಗಾರರಿಗೆ ಜಾಮೀನು ಮಂಜೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.