ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲಾಗಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರನ್ನು ಒಂದು ತಿಂಗಳ ಮಟ್ಟಿಗೆ ಗೃಹಬಂಧನದಲ್ಲಿ ಇರಿಸುವ ಪ್ರಕ್ರಿಯೆ ಕುರಿತ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಮಂಗಳವಾರ ನಡೆಸಿತು.
ವಿಚಾರಣೆಗಾಗಿ ಗೌತಮ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜೊತೆಗೆ, ಎಲ್ಗಾರ್ ಪರಿಷತ್ ಪ್ರಕರಣ ಸಂಬಂಧ ಎಂದಿನ ವಿಚಾರಣೆ ಇದ್ದ ಕಾರಣ, ಪ್ರಕರಣದ ಇನ್ನಿತರ ಆರೋಪಿಗಳನ್ನೂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
ನವಿ ಮುಂಬೈಯ ತಾಲೋಜಾ ಕಾರಾಗೃಹದಲ್ಲಿರುವ ನವಲಖಾ ಅವರನ್ನು ವೈದ್ಯಕೀಯ ಕಾರಣಗಳಿಗಾಗಿ ಒಂದು ತಿಂಗಳ ಮಟ್ಟಿಗೆ ಗೃಹಬಂಧನದಲ್ಲಿ ಇರಿಸಲು ಕಳೆದ ವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದೇಶವಾದ 48 ತಾಸುಗಳ ಒಳಗಾಗಿ ನವಲಖಾ ಅವರನ್ನು ಗೃಹಬಂಧನದಲ್ಲಿ ಇರಿಸಬೇಕು ಎಂದು ಕೋರ್ಟ್ ಹೇಳಿತ್ತು. ಆದರೆ, ಗೃಹಬಂಧನದಲ್ಲಿ ಇರಿಸುವ ಕುರಿತ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಅವರು ಇನ್ನೂ ಕಾರಾಗೃಹದಲ್ಲಿಯೇ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.