ಮುಂಬೈ: ಹೋಟೆಲ್ ಉದ್ಯಮಿ ಜಗನ್ನಾಥ ಶೆಟ್ಟಿ (89) ಅವರು ಪುಣೆಯಲ್ಲಿ ಭಾನುವಾರ ನಿಧನರಾದರು. ಅವರಿಗೆ ಪುತ್ರಿ ಇದ್ದಾರೆ.
ಆಪ್ತ ಬಳಗದಲ್ಲಿ ಅವರನ್ನು ‘ಜಗನ್ನಾಥ ಅಣ್ಣ’ ಎಂದೇ ಕರೆಯಲಾಗುತ್ತಿತ್ತು. ಅವರು ಕಾರ್ಕಳ ಬಳಿಯ ಬೈಲೂರಿನ ಓಣಿಮಜಲು ಮನೆಯವರು.
ಪುಣೆ ನಿವಾಸಿಗಳಿಗೆ ಇಡ್ಲಿ, ದೋಸೆ, ವಡಾ, ಉಪ್ಪಿಟ್ಟು ಸೇರಿದಂತೆ ದಕ್ಷಿಣ ಭಾರತದ ಊಟ ಮತ್ತು ತಿಂಡಿಗಳನ್ನು ಪರಿಚಯಿಸಿದ ಕೀರ್ತಿ ಶೆಟ್ಟಿ ಅವರದು. ಅವರು ‘ವೈಶಾಲಿ‘, ‘ರೂಪಾಲಿ’ ಹಾಗೂ ‘ಆಮ್ರಪಾಲಿ’ ಎಂಬ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಿದ್ದರು. ಗಣ್ಯ ಉದ್ದಿಮೆದಾರರಾದ ಪೂನಾವಾಲಾ, ಬಜಾಜ್, ಕಿರ್ಲೋಸ್ಕರ್ ಹಾಗೂ ಕಲ್ಯಾಣಿ ಕುಟುಂಬಗಳಿಗೆ ‘ವೈಶಾಲಿ’ ರೆಸ್ಟೋರೆಂಟ್ ನೆಚ್ಚಿನ ತಾಣವಾಗಿತ್ತು.
ಉತ್ತಮ ಗಾಲ್ಫ್ ಆಟಗಾರರಾಗಿದ್ದ ಅವರು, ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ವರದಕ್ಷಿಣೆ ವಿರುದ್ಧ ಆಂದೋಲನ ಆರಂಭಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.