ಮುಂಬೈ: ಕೆಲಸ ಮಾಡುವ ಸಂಸ್ಥೆಯಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂದು ಉದ್ಯೋಗಿಯೊಬ್ಬರು ಆರೋಪಿಸಿದ ಬೆನ್ನಲ್ಲೇ, ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದರ ಮಾಲೀಕರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಗೋರೆಗಾಂವ್ ಪ್ರದೇಶದಲ್ಲಿರುವ ಸಂಸ್ಥೆಯ ಮಾಲೀಕರು ಏಪ್ರಿಲ್ 14ರಂದು ಜಾತಿ ಆಧಾರಿತವಾಗಿ ಚುಚ್ಚು ಮಾತನಾಡಿದರು ಎಂದು 23 ವರ್ಷದ ಉದ್ಯೋಗಿ ದೂರು ನೀಡಿದ್ದಾರೆ.
‘ತಾವು ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದವರೇ ಎಂದು ಮಾಲೀಕರು ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದಾಗ, ಅವರು, ‘ಹಿಂದುಳಿದ ಸಮುದಾಯಗಳಿಗೆ ಕೆಲಸ ನೀಡುವುದಿಲ್ಲ’ ಎಂದು ಹೇಳಿದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಉದ್ಯೋಗಿ ತಮಗಾದ ಅನುಭವವನ್ನು ಅವರ ಪೋಷಕರ ಬಳಿ ಹಂಚಿಕೊಂಡರು. ಬಳಿಕ ಠಾಣೆಗೆ ದೂರು ನೀಡಿದರು ಎಂದು ಅಧಿಕಾರಿಗಳು ತಿಳಿಸಿದರು.
ಕಂಪನಿ ಮಾಲೀಕರ ಮೇಲೆ ಪರಿಶಿಷ್ಟ ಜಾರಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ 1955ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.