ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿರುವುದು ಆಧಾರ ರಹಿತವಾಗಿದೆ.ಇ.ಡಿ ಅಧಿಕಾರ ವ್ಯಾಪ್ತಿಯು ಬಿಜೆಪಿ ಸದಸ್ಯರು ಅಥವಾ ಕೇಸರಿ ಪಕ್ಷ ಆಡಳಿತದ ರಾಜ್ಯಗಳಿಗೆ ವಿಸ್ತರಿಸುವುದಿಲ್ಲವೆಂದು ತೋರುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸಲು
ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
‘ಪಿಎಂಎಲ್‌ಎ ಕಾಯ್ದೆ ಅಡಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಇ.ಡಿ ಸಮನ್ಸ್ ನೀಡಿರುವುದು ಆಧಾರರಹಿತ,. ನ್ಯಾಷನಲ್ ಹೆರಾಲ್ಡ್ ಸಾಲದಿಂದ ಈಕ್ವಿಟಿ ಪರಿವರ್ತನೆಯಲ್ಲಿ, ಸಾಲ ನೀಡುವ ಬ್ಯಾಂಕ್‌ಗಳು ನಿಯಮಿತವಾಗಿ ಮಾಡುವ ಯಾವುದಾದರೂ ಹಣದ ವಹಿವಾಟು ಇರಲಿಲ್ಲ. ಹೀಗಿರುವಾಗ ಹಣ ಅಕ್ರಮ ವರ್ಗಾವಣೆ ಹೇಗೆ ಸಾಧ್ಯ‘ ಎಂದು ಪ್ರಶ್ನಿಸಿದರು.
‘ಇದು ಪರ್ಸ್ ಇಲ್ಲದಿದಿದ್ದರೂ ಒಬ್ಬ ವ್ಯಕ್ತಿಯನ್ನು 'ಪರ್ಸ್ ಕಸಿದುಕೊಂಡ' ಎಂದು ಆರೋಪ ಮಾಡಿದಂತೆ. ಪಕ್ಷದ ನಾಯಕರು ಸೋಮವಾರ ರಾಹುಲ್ ಗಾಂಧಿ ಜತೆ ಇ.ಡಿ ಕಚೇರಿ ವರೆಗೆ ಮೆರವಣಿಗೆ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುವರು‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.