ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ತೃಣಮೂಲ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷೆ ಹಾಗೂ ನಟಿ ಸಯಾನಿ ಘೋಷ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ನೀಡಿದೆ.
ನಗರದ ಹೊರವಲಯದ ಸಾಲ್ಟ್‌ಲೇಕ್‌ನಲ್ಲಿರುವ ಇ.ಡಿ. ಕಚೇರಿಗೆ ಜೂನ್ 30ರಂದು ಆಗಮಿಸುವಂತೆ ಅವರಿಗೆ ಮಂಗಳವಾರ ಸಂಜೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟಿಎಂಸಿಯ ಉಚ್ಛಾಟಿತ ನಾಯಕ ಹಾಗೂ ಸದ್ಯ ನ್ಯಾಯಾಂಗ ವಶದಲ್ಲಿರುವ ಕುಂತಲ್ ಘೋಷ್ ಜೊತೆಗಿನ ವಾಟ್ಸ್‌ಆ್ಯಪ್ ಚಾಟ್ ಹಾಗೂ ಆಸ್ತಿ ಖರೀದಿ ವಿಚಾರವಾಗಿ ಇಬ್ಬರ ನಡುವೆ ನಡೆದಿರುವ ಹಣದ ವ್ಯವಹಾರದ ದಾಖಲೆ ಪತ್ತೆಯಾದ ಹಿನ್ನೆಲೆಯಲ್ಲಿ ಸಯಾನಿಗೆ ನೋಟಿಸ್ ನೀಡಲಾಗಿದೆ.
ಅಧಿಕಾರಿಗಳು ಕುಂತಲ್ ಘೋಷ್ ಮೊಬೈಲ್‌ನಲ್ಲಿದ್ದ ವಾಟ್ಸ್‌ಆ್ಯಪ್ ಸಂದೇಶ ವಿನಿಮಯದ ಮಾಹಿತಿ ಸಂಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.