ADVERTISEMENT

ದೆಹಲಿ | ಮೆಟ್ರೊ ನಿಲ್ದಾಣದಲ್ಲಿ ಎಲಿವೇಟರ್ ತಂತಿ ತುಂಡಾಗಿ ಎಂಜಿನಿಯರ್ ಸಾವು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 5:16 IST
Last Updated 23 ನವೆಂಬರ್ 2024, 5:16 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಹೇರ್‌ದರ್‌ಪುರ ಮೆಟ್ರೊ ನಿಲ್ದಾಣದಲ್ಲಿ ಎಲಿವೇಟರ್ (ಲಿಫ್ಟ್) ತಂತಿ ತುಂಡಾಗಿ ಕುಸಿದು ಬಿದ್ದ ಹಿರಿಯ ಮೆಕ್ಯಾನಿಕಲ್ ಎಂಜಿನಿಯರ್ ಸ್ಥಳದಲ್ಲೇ ಮೃತಪಟ್ಟಿದ್ದು, ಮೇಲ್ವಿಚಾರಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದ ಪಟ್ನಾ ಮೂಲದ 31 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಆದಿತ್ಯ ಪ್ರಕಾಶ್ ಮತ್ತು ಮೇಲ್ವಿಚಾರಕ ಮೊಹಮ್ಮದ್ ಸಾಹಿಬ್ (45) ಅವರು 60-70 ಅಡಿ ಎತ್ತರದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎಲಿವೇಟರ್ ದಿಢೀರನೇ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ದೆಹಲಿ ಮೆಟ್ರೊ ರೈಲು ನಿಗಮದಿಂದ (ಡಿಎಂಆರ್‌ಸಿ) ಗುತ್ತಿಗೆ ಪಡೆದಿರುವ ಕೆಇಸಿ ಕಂಪನಿಯಲ್ಲಿ ಆದಿತ್ಯ ಪ್ರಕಾಶ್ ಮತ್ತು ಮೊಹಮ್ಮದ್ ಸಾಹಿಬ್ ಕೆಲಸ ಮಾಡುತ್ತಿದ್ದರು. ಘಟನೆ ಸಂಬಂಧ ದೆಹಲಿ ಮೆಟ್ರೊ ರೈಲು ನಿಗಮ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ಘಟನೆ ಸಂಬಂಧ ಮಹೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 289, 125 ಮತ್ತು 106 (1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.