ಪಿಟಿಐ
ನವದೆಹಲಿ: ನಮೀಬಿಯಾದಿಂದ ತಂದಿದ್ದ ಚೀತಾವು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮೂರಲ್ಲ, ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಬುಧವಾರ ತಿಳಿಸಿದ್ದಾರೆ. ಇದಕ್ಕೂ ಮುನ್ನ ಈ ಚೀತಾವು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ವರದಿಯಾಗಿತ್ತು.
ಈ ವಿಷಯವನ್ನು ‘ಎಕ್ಸ್’ ಮೂಲಕ ತಿಳಿಸಿರುವ ಯಾದವ್, ‘ಜಲ್ವಾ ಹೆಸರಿನ ಚೀತಾವು ಮೂರಲ್ಲ, ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ತಿಳಿದುಬಂದಿದೆ. ಇದರಿಂದ ನಮ್ಮ ಸಂತೋಷ ದುಪ್ಪಟ್ಟಾಗಿದೆ. ಎಲ್ಲರಿಗೂ ಅಭಿನಂದನೆಗಳು’ ಎಂದು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಚೀತಾವು ಜ.20ರಂದು ಮರಿಗಳಿಗೆ ಜನ್ಮ ನೀಡಿದೆ.
ಇದರೊಂದಿಗೆ ಕುನೊ ಉದ್ಯಾನದಲ್ಲಿ ಇರುವ ಚೀತಾ ಮರಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಒಟ್ಟು ಚೀತಾಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. 2023ರ ಮಾರ್ಚ್‌ನಿಂದ ಈವರೆಗೆ ಇಲ್ಲಿ ಏಳು ಚೀತಾಗಳು ಮೃತಪಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.