ADVERTISEMENT

ಜಾರ್ಖಂಡ್‌ | ಏಕಾಂಗಿಯಾಗಿ ಸ್ಪರ್ಧಿಸಿದರೂ ‘ಇಂಡಿಯಾ’ ಮೈತ್ರಿಗೆ ಧಕ್ಕೆ ತರಲ್ಲ: RJD

ಜಾರ್ಖಂಡ್‌ ವಿಧಾನಸಭೆ ಚುನಾವಣೆ

ಪಿಟಿಐ
Published 20 ಅಕ್ಟೋಬರ್ 2024, 13:53 IST
Last Updated 20 ಅಕ್ಟೋಬರ್ 2024, 13:53 IST
ಮನೋಜ್ ಕುಮಾರ್ ಝಾ
ಮನೋಜ್ ಕುಮಾರ್ ಝಾ   

ರಾಂಚಿ: ‘ನಮ್ಮ ಏಕೈಕ ಗುರಿ ಬಿಜೆಪಿ ಸೋಲಿಸುವುದು. ಹೀಗಾಗಿ ‘ಇಂಡಿಯಾ’ ಮೈತ್ರಿಗೆ ಯಾವುದೇ ಹಾನಿ ಮಾಡಲ್ಲ’ ಎಂದು ಆರ್‌ಜೆಡಿಯ ರಾಜ್ಯಸಭಾ ಸದಸ್ಯ ಮನೋಜ್‌ ಕುಮಾರ್‌ ಝಾ ಹೇಳಿದ್ದಾರೆ.

‘ಜಾರ್ಖಂಡ್‌ನಲ್ಲಿ 12ಕ್ಕಿಂತ ಕಡಿಮೆ ಕ್ಷೇತ್ರಗಳನ್ನು ಒಪ್ಪಿಕೊಳ್ಳಲ್ಲ. ನಾವು ಏಕಾಂಗಿಯಾಗಿ ಸ್ಪರ್ಧಿಸಿದರೂ, 60ರಿಂದ 62 ಕ್ಷೇತ್ರಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

‘18ರಿಂದ 20 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಾಢ್ಯವಾಗಿರುವ ನಮಗೆ, ಕನಿಷ್ಠ 12ರಿಂದ 13 ಕ್ಷೇತ್ರಗಳನ್ನು ನೀಡಬೇಕು. ಮೂರ್ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಹೇಳಿದರೆ, ನಾವು ಅದನ್ನು ಒಪ್ಪಲ್ಲ’ ಎಂದು ಆರ್‌ಜೆಡಿ ವಕ್ತಾರರೂ ಆಗಿರುವ ಝಾ ಹೇಳಿದ್ದಾರೆ.

ADVERTISEMENT

ರಾಜ್ಯದ 81 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಎಂಎಂ ಮತ್ತು ಕಾಂಗ್ರೆಸ್‌ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದು ಶನಿವಾರ ಘೋಷಿಸಿದ ಬೆನ್ನಿಗೆ, ಆರ್‌ಜೆಡಿ ಈ ಹೇಳಿಕೆ ನೀಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು. ಶಾಸಕ ಸತ್ಯಾನಂದ ಭೋಕ್ತಾ ಅವರು ಹೇಮಂತ್ ಸೊರೇನ್ ಸಂಪುಟದಲ್ಲಿ ಸಚಿವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.