ADVERTISEMENT

ಪ್ರತಿ ಹನಿ ರಕ್ತಕ್ಕೂ ಪ್ರತ್ಯುತ್ತರ: ಜಮ್ಮು & ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌

ಪಿಟಿಐ
Published 26 ಅಕ್ಟೋಬರ್ 2024, 14:03 IST
Last Updated 26 ಅಕ್ಟೋಬರ್ 2024, 14:03 IST
ಮನೋಜ್‌ ಮಿಶ್ರಾ
ಮನೋಜ್‌ ಮಿಶ್ರಾ   

ಶ್ರೀನಗರ: ಕೇಂದ್ರಾಡಳಿತ ಪ್ರದೇಶದ ನೆಲದ ಮೇಲೆ ಬಿದ್ದ ಮುಗ್ಧರ ಪ್ರತಿ ಹನಿ ರಕ್ತಕ್ಕೂ ಪ್ರತ್ಯುತ್ತರ ನೀಡುತ್ತೇವೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಮಿಶ್ರಾ ಅವರು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಗರದ ಹೊರವಲಯದಲ್ಲಿ ನಡೆದ, ಗಡಿ ಭದ್ರತಾ ಪಡೆಗೆ ನೇಮಕವಾದ 629 ಸೈನಿಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಯೋತ್ಪಾದನೆಯ ಬೆದರಿಕೆಯನ್ನು ಮಟ್ಟಹಾಕಲು ನೂತನ ಕಾರ್ಯತಂತ್ರವನ್ನು ಹೆಣೆಯಲಾಗಿದೆ. ನೆಲದ ಮೇಲೆ ಬಿದ್ದ ಪ್ರತಿ ಹನಿ ರಕ್ತಕ್ಕೂ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಲಿವೆ’ ಎಂದು ಎಚ್ಚರಿಕೆ ನೀಡಿದರು.

ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ, ‘ಭಾರತವು ನೆರೆಯ ರಾಷ್ಟ್ರಗಳಿಂದ ಶಾಂತಿ ಬಯಸುತ್ತದೆ. ಆದರೆ, ದುದೃಷ್ಟವಶಾತ್‌ ಬಡತನ ತಾಂಡವವಾಡುತ್ತಿದ್ದರೂ ಯಾವಾಗಲೂ ಶಾಂತಿ ಕದಡಲು ಯತ್ನಿಸುವ ದೇಶವನ್ನು ಪಕ್ಕದಲ್ಲಿ ಹೊಂದಿದ್ದೇವೆ’ ಎಂದು ಹೇಳಿದರು.

ADVERTISEMENT

ಡ್ರೋನ್‌ಗಳ ಮೂಲಕ ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಂತಹ ಪ್ರಮುಖ ಸವಾಲುಗಳ ವಿರುದ್ಧ ಹೋರಾಡಲು ಸೇನೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿದೆ. ನಮ್ಮ ಯುವ ಜನರನ್ನು ಡ್ರಗ್ಸ್ ವ್ಯಸನಿಗಳನ್ನಾಗಿ ಮಾಡಲಾಗುತ್ತಿದೆ. ಅದರಲ್ಲಿ ಸಂಗ್ರಹವಾದ ಹಣವನ್ನು ಭಯೋತ್ಪಾದನೆಗೆ ಮೀಸಲಿಡಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.