ಹೈದರಾಬಾದ್: ಕಳೆದ ಎಂಟು ವರ್ಷಗಳಲ್ಲಿ ಭಾರತದ ಸಾಲ ನೂರು ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ತೆಲಂಗಾಣದ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕೆ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್) ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಹುಟ್ಟುವ ಪ್ರತಿ ಮಗುವೂ ₹ 1.25 ಲಕ್ಷ ಸಾಲದ ಹೊರೆ ಹೊರಬೇಕಾಗುತ್ತದೆ ಎಂದು ತೆಲಂಗಾಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಕಾರ್ಯಾಧ್ಯಕ್ಷರೂ ಆಗಿರುವಕೆಟಿಆರ್ ನಿರ್ಮಲಾ ಹೇಳಿಕೆ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಹಣಕಾಸು ಸಚಿವೆ ಮೇಡಂ ಅವರು ಹಣಕಾಸು ದೂರದೃಷ್ಟಿಯ ಬಗ್ಗೆ ನಿರ್ಗಗಳವಾಗಿ ಮಾತನಾಡುತ್ತಾರೆ. 2014ರ ವರೆಗಿನ ಕಳೆದ 67 ವರ್ಷಗಳಲ್ಲಿ 14 ಪ್ರಧಾನಮಂತ್ರಿಗಳು ಸೇರಿ ದೇಶದ ಸಾಲವನ್ನು ಒಟ್ಟು 56 ಲಕ್ಷ ಕೊಟಿಗೆ ಏರಿಸಿದ್ದರು. ನಂತರ ಪ್ರಧಾನಿ ಮೋದಿ ಜೀ ಅಧಿಕಾರಕ್ಕೇರಿದರು. ಕಳೆದ 8 ವರ್ಷಗಳಲ್ಲಿ ಭಾರತದ ಸಾಲ ₹ 100 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.ಪ್ರತಿಯೊಬ್ಬ ಭಾರತೀಯನೂ ₹ 1.25 ಲಕ್ಷಸಾಲವನ್ನು ಹೊಂದಿದ್ದಾರೆ' ಎಂದು ಉಲ್ಲೇಖಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ,2022ರಲ್ಲಿ ತೆಲಂಗಾಣದತಲಾ ಆದಾಯ ಸರಾಸರಿ ₹ 2.78 ಲಕ್ಷದಷ್ಟಿದೆ. ಆದರೆ, ದೇಶದ ಸರಾಸರಿ ತಲಾ ಆದಾಯ ₹ 1.49 ಲಕ್ಷದಷ್ಟಿದೆ ಎಂದು ಒತ್ತಿ ಹೇಳಿದ್ದಾರೆ.
ದೇಶದ ಜನಸಂಖ್ಯೆಯ ಶೇ 2.5 ರಷ್ಟು ಇರುವ ತೆಲಂಗಾಣವು ಭಾರತದ ಜಿಡಿಪಿಗೆ ಶೇ 5 ರಷ್ಟು ಕೊಡುಗೆ ನೀಡುತ್ತಿದೆ ಎಂದುಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2021ರಲ್ಲಿ ವರದಿ ಪ್ರಕಟಿಸಿತ್ತು. ಇದನ್ನು ಉಲ್ಲೇಖಿಸಿರುವ ಕೆಟಿಆರ್, ದೇಶಕ್ಕೆ ಬೇಕಿರುವುದು ಡಬಲ್ ಇಂಪ್ಯಾಕ್ಟ್ (ಎರಡರಷ್ಟು ಪರಿಣಾಮಕಾರಿ) ಸರ್ಕಾರ. ಡಬಲ್ ಎಂಜಿನ್ ಸರ್ಕಾರವಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೂ ತೆಲಂಗಾಣದಂತೆ ಕಾರ್ಯ ನಿರ್ವಹಿಸಿದರೆ, ದೇಶದ ಆರ್ಥಿಕತೆ 4.6 ಶತಕೋಟಿ ಡಾಲರ್‌ಗೆ ತಲುಪುತ್ತಿತ್ತು ಎಂದುತಿವಿದಿದ್ದಾರೆ.
'ಸಂಸತ್ ಪ್ರವಾಸ ಯೋಜನೆ' ಅಡಿಯಲ್ಲಿತೆಲಂಗಾಣದ ಜಹೀರಾಬಾದ್ ಲೋಕಸಭಾ ಕ್ಷೇತ್ರಕ್ಕೆ ಮೂರು ದಿನಭೇಟಿ ನೀಡಿದ್ದನಿರ್ಮಲಾ ಸೀತಾರಾಮನ್ ರಾಜ್ಯದಲ್ಲಿಸಾಲ ಹೆಚ್ಚಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಟಿಆರ್‌ಎಸ್ ಸರ್ಕಾರವು ಆರ್ಥಿಕ ಹೊಣೆಗಾರಿಕೆ ಮತ್ತು ಬಜೆಟ್‌ನಿರ್ವಹಣೆ (ಎಫ್‌ಆರ್‌ಬಿಎಂ) ಕಾಯ್ದೆಯನ್ನು ಉಲ್ಲಂಘಿಸಿದೆ. ಇಲ್ಲಿ (ತೆಲಂಗಾಣದಲ್ಲಿ) ಹುಟ್ಟುವ ಪ್ರತಿ ಮಗುವೂ ₹ 1.25 ಲಕ್ಷ ಸಾಲ ಹೊರುತ್ತಿದೆ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.