ಚೆನ್ನೈ: ಮಾಜಿ ಸೇನಾ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ (83) ಅವರು ವಯೋಸಹಜ ಕಾಯಿಲೆಗಳಿಂದಾಗಿ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.
ಅವರು 2000ನೇ ಇಸವಿಯ ಸೆಪ್ಟೆಂಬರ್ 30ರಿಂದ 2002ರ ಡಿಸೆಂಬರ್ 31ರವರೆಗೆ ಸೇನಾ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದ್ದರು.
ಪದ್ಮನಾಭನ್ ಅವರಿಗೆ ಪತ್ನಿ, ಮಗಳು ಮತ್ತು ಮಗ ಇದ್ದಾರೆ. ಅಂತ್ಯಕ್ರಿಯೆಯು ಮಂಗಳವಾರ ಸಂಜೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
15 ಕೋರ್‌ನ ಕಮಾಂಡರ್ ಆಗಿ ಸಲ್ಲಿಸಿದ್ದ ಸೇವೆಯನ್ನು ಪರಿಗಣಿಸಿ ಜನರಲ್ ಪದ್ಮನಾಭನ್ ಅವರಿಗೆ ‘ಅತಿ ವಿಶಿಷ್ಟ ಸೇವಾ ಪದಕ’ ನೀಡಲಾಗಿತ್ತು.
ಜನರಲ್ ಪದ್ಮನಾಭನ್ ಅವರು ಡೆಹ್ರಾಡೂನ್‌ನ ರಾಷ್ಟ್ರಿಯ ಭಾರತೀಯ ಮಿಲಿಟರಿ ಕಾಲೇಜು ಹಾಗೂ ಖಡಕ್‌ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.