ಲಖನೌ: ಕಾನೂನುವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದರವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಜೆಪಿಯಿಂದ ಮೂರು ಬಾರಿ ಸಂಸದರಾಗಿದ್ದ ಚಿನ್ಮಯಾನಂದ, 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಂತರಿಕ ಭದ್ರತೆಯ ರಾಜ್ಯ ಸಚಿವರಾಗಿದ್ದರು. ಇವರು ಉತ್ತರಪ್ರದೇಶದ ಶಾಹಜಾನ್‌ಪುರದಲ್ಲಿರುವ ಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯಸ್ಥರಾಗಿದ್ದಾರೆ.
ಆಗಸ್ಟ್ 24ರಂದು ಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಎಂ ಪದವಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವಿಡಿಯೊವೊಂದನ್ನು ಪ್ರಕಟಿಸಿದ್ದರು. ‘ಈ ಸಮಾಜದಲ್ಲಿ ಸಂತನಂತೆ ಮುಖವಾಡ ಧರಿಸಿರುವ ನಾಯಕನೊಬ್ಬನಿಂದ ನೂರಾರು ಹೆಣ್ಣು ಮಕ್ಕಳ ಜೀವನ ನಾಶವಾಗಿದೆ, ಈ ಬಗ್ಗೆ ನನ್ನ ಬಳಿ ಸಾಕ್ಷ್ಯಗಳಿವೆ. ನನಗೆ ಅವರಿಂದ ಜೀವಬೆದರಿಕೆ ಇದೆ ಎಂದು ಆ ವಿದ್ಯಾರ್ಥಿನಿವಿಡಿಯೊವನ್ನು ಪೋಸ್ಟ್ ಮಾಡಿದ್ದರು.
ಈ ಪೊಸ್ಟ್ ಹಾಕಿದ ದಿನದಿಂದ ಆ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯ ಕುಟುಂಬದವರುಸ್ವಾಮಿ ಚಿನ್ಮಯಾನಂದವಿರುದ್ಧ ಅಪಹರಣ ಪ್ರಕರಣದ ದೂರು ದಾಖಲಿಸಿದ್ದಾರೆ.
ನಾಪತ್ತೆಯಾಗಿರುವ ವಿದ್ಯಾರ್ಥಿ ತಂದೆ ಸ್ವಾಮಿ ಚಿನ್ಮಯಾನಂದರವಿರುದ್ಧ ದೂರು ನೀಡಿದ್ದಾರೆ, ಅವರ ವಿರುದ್ಧ ಅಪಹರಣ ಮತ್ತು ಜೀವಬೆದರಿಕೆ ಪ್ರಕರಣದ ದೂರನ್ನು ದಾಖಲಿಸಿಕೊಂಡಿರುವುದಾಗಿಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಓ.ಪಿ.ಸಿಂಗ್ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದುಓ.ಪಿ.ಸಿಂಗ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.