ಶ್ರೀನಗರ: ನಿನ್ನೆ (ಸೆ.13ರಂದು) ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಡಿಎಸ್‌ಪಿ ಹುಮಾಯುನ್ ಭಟ್ ಅವರಿಗೆ, ಅವರ ತಂದೆ ಜಮ್ಮು ಕಾಶ್ಮೀರದ ನಿವೃತ್ತ ಡಿಐಜಿ ಗುಲಾಮ್ ಹಸನ್ ಭಟ್ ಅವರು ಅಂತಿಮ ನಮನ ಸಲ್ಲಿಸಿರುವ ದೃಶ್ಯ ಮನಕಲಕುವಂತಿದೆ.
ವೀರ ಮರಣ ಹೊಂದಿದ ಮಗನ ಪಾರ್ಥಿವ ಶರೀರದ ಎದುರು ಭಾರವಾದ ಹೆಜ್ಜೆಗಳನ್ನಿಟ್ಟು ಬಂದು ಪುಷ್ಪಗುಚ್ಛವಿಟ್ಟಿದ್ದಾರೆ. ದೇಶಕ್ಕಾಗಿ ಮಡಿದ ಮಗನ ಮೃತದೇಹದೆದುರು ಒಬ್ಬ ಪೊಲೀಸ್ ಅಧಿಕಾರಿಗೆ ಇರುವ ಗಟ್ಟಿತನದೊಂದಿಗೆ ಒಂದು ಹನಿಯೂ ಕಣ್ಣಿರು ಸುರಿಸದೆ ನಮನ ಸಲ್ಲಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹುಮಾಯುನ್ ಭಟ್ ಅವರು ಉಗ್ರರ ಗುಂಡೇಟಿಗೆ ಒಳಗಾಗಿದ್ದರು, ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯಗಳಿಂದ ಅಪಾರ ಪ್ರಮಾಣದಲ್ಲಿ ರಕ್ತ ನಷ್ಟವಾದ್ದರಿಂದ ಬದುಕುಳಿಯಲಿಲ್ಲ. ಹುಮಾಯುನ್ ಅವರ ಜತೆಗೆ ಕರ್ನಲ್ ಮನಪ್ರೀತ್ ಸಿಂಗ್, ಮೇಜರ್ ಆಶೀಶ್ ಧೋನಚ್ ಕೂಡ ಹುತಾತ್ಮರಾಗಿದ್ದಾರೆ.
ಹುಮಾಯುನ್ 2018ರಲ್ಲಿ ಜಮ್ಮು ಮತ್ತು ಕಾಶ್ಮೀರ್‌ದಲ್ಲಿ ಪೊಲೀಸ್ ಸೇವೆ ಆರಂಭಿಸಿದ್ದರು. ಕಳೆದ ವರ್ಷ ಮದುವೆಯಾಗಿದ್ದ ಅವರಿಗೆ ಎರಡು ತಿಂಗಳ ಮಗು ಕೂಡ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.