ಜಮ್ಮು: 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೈಷ್–ಎ–ಮೊಹಮ್ಮದ್ (ಜೆಇಎಂ)ನ ಮಾಜಿ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೌಗಾಮ್ ಗ್ರಾಮದ ನಿವಾಸಿಯಾದ ಬಶೀರ್ ಅಹ್ಮದ್ ಅಲಿಯಾಸ್ ಜಾಫರ್ ಖಾನ್, ಮರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2001 ರ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಅಹ್ಮದ್ ಸೆಪ್ಟೆಂಬರ್ 15 ರಿಂದ ಜಿಲ್ಲೆಯಲ್ಲಿ ಬಂಧಿಸಿದ ನಾಲ್ಕನೇ ಉಗ್ರನಾಗಿದ್ದಾನೆ. ಈತನಿಗೂ ಮುನ್ನ 12 ವರ್ಷ ತಲೆಮರೆಸಿಕೊಂಡಿದ್ದ ನಜೀರ್ ಅಹ್ಮದ್‌ನನ್ನು ಸೆಪ್ಟೆಂಬರ್ 15 ರಂದು ಬಂಧಿಸಲಾಯಿತು. ಅದಾದ ಎರಡು ದಿನಗಳ ನಂತರ 19 ವರ್ಷ ತಲೆಮರೆಸಿಕೊಂಡಿದ್ದ ಅಬ್ದುಲ್ ಗನಿ ಅಲಿಯಾಸ್ ಮಾವಿಯಾ ಎಂಬಾತನನ್ನು ಮತ್ತು 20 ವರ್ಷಗಳ ನಂತರ ಸೆಪ್ಟೆಂಬರ್ 25 ರಂದು ದುಲ್ಲಾ ಅಲಿಯಾಸ್ ಜಮೀಲ್‌ನನ್ನು ಪೊಲೀಸರು ಬಂಧಿಸಿದ್ದರು.
ನಿಖರ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಮಾರ್ವಾ ಪ್ರದೇಶದಲ್ಲಿ ಸಂಶಯಾಸ್ಪದ ಸ್ಥಳಗಳ ಮೇಲೆ ದಾಳಿ ನಡೆಸಿದ ನಂತರ ಬಶೀರ್ ಅಹ್ಮದ್‌ನನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಸದ್ಯ ಸ್ಥಳೀಯ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.