ADVERTISEMENT

ಗುಜ್ಜಾರ್ ಸಮುದಾಯಕ್ಕೆ ಅವಮಾನ- ಯುಪಿಯಿಂದ ಬಿಜೆಪಿ ಹೊರಗಿಡಿ: ಬಿಜೆಪಿ ಮಾಜಿ ಸಂಸದ

ಪಿಟಿಐ
Published 3 ಅಕ್ಟೋಬರ್ 2021, 8:34 IST
Last Updated 3 ಅಕ್ಟೋಬರ್ 2021, 8:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಜಾಫರ್‌ನಗರ: ತನಗಾಗಿರುವ ಅವಮಾನಕ್ಕೆ ಪ್ರತಿಯಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುಜ್ಜಾರ್ ಸಮುದಾಯವು ಉತ್ತರ ಪ್ರದೇಶದ ಅಧಿಕಾರದಿಂದ ಹೊರಗುಳಿಸುವ ಮೂಲಕ ಆಡಳಿತ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳಲಿದೆ ಎಂದು ಬಿಜೆಪಿ ಮಾಜಿ ಶಾಸಕ ಅವತಾರ್ ಸಿಂಗ್ ಭದಾನ ಹೇಳಿದ್ದಾರೆ.

ಇಲ್ಲಿದೆ ಸಮೀಪದ ಶುಕರ್ತಲದ ಧಾರ್ಮಿಕ ಸ್ಥಳದಲ್ಲಿ ನಡೆದ ಗುಜ್ಜಾರ್ ಸಮ್ಮೇಳನದಲ್ಲಿ ಮಾತನಾಡಿದ ಅವರು, 2022 ರ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿನ ಬಿಜೆಪಿ ಸರ್ಕಾರವನ್ನು ಆಡಳಿತದಿಂದ ಹೊರಗುಳಿಸಲು ಸಮುದಾಯವು ಒಗ್ಗೂಡುವಂತೆ ಮನವಿ ಮಾಡಿದರು.

ಉತ್ತರ ಪ್ರದೇಶದ ಬಿಜೆಪಿ ಆಡಳಿತದಲ್ಲಿ ಸಮುದಾಯವನ್ನು ಅವಮಾನಿಸಲಾಗಿದೆ ಮತ್ತು ದಾದ್ರಿಯಲ್ಲಿ ಪ್ರತಿಮೆ ಅನಾವರಣದ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಕಳೆದ ವಾರ 9 ನೇ ಶತಮಾನದ ರಾಜ ಮಿಹಿರ್ ಭೋಜ್ ಅವರ ಪ್ರತಿಮೆಯನ್ನು ದಾದ್ರಿಯ ಕಾಲೇಜಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನಾವರಣಗೊಳಿಸಿದ ವೇಳೆ ರಾಜ ಮಿಹಿರ್ ಭೋಜ್ ಅವರ ಪರಂಪರೆಯ ಕುರಿತು ರಜಪೂತ್ ಮತ್ತು ಗುಜ್ಜಾರ್ ಸಮುದಾಯಗಳ ನಡುವೆ ವಿವಾದ ಉಂಟಾಗಿತ್ತು.

ಕೇಂದ್ರದ ಮೂರು ಕೃಷಿ ಕಾನೂನುಗಳ ಬಗ್ಗೆ ಅಸಮಾಧಾನಗೊಂಡ ನಂತರ ಈ ವರ್ಷದ ಆರಂಭದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದ ಭದಾನ, 'ರೈತ ವಿರೋಧಿ' ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

'ಚುನಾವಣೆಯಲ್ಲಿ ರಾಜಕೀಯ ಶಕ್ತಿಯನ್ನು ತೋರಿಸುವ ಮೂಲಕ ಗುಜ್ಜಾರ್ ಸಮುದಾಯದ ಘನತೆಯನ್ನು ಎತ್ತಿ ಹಿಡಿಯಲು ಒಂದು ರಾಜಕೀಯ ಪಕ್ಷವನ್ನು ರಚಿಸುವುದಾಗಿ' ಮಾಜಿ ಸಂಸದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.