ADVERTISEMENT

ಉನ್ನಾವ್ ಅತ್ಯಾಚಾರ ಆರೋಪಿ ಬಿಜೆಪಿ ಮಾಜಿ ಶಾಸಕನಿಗೆ ಮತ್ತೆ 10 ವರ್ಷ ಜೈಲು ಶಿಕ್ಷೆ

ಅತ್ಯಾಚಾರ ಸಂತ್ರಸ್ತೆಯ ತಂದೆ ಸಾವಿನ ಪ್ರಕರಣ

ಏಜೆನ್ಸೀಸ್
Published 13 ಮಾರ್ಚ್ 2020, 7:38 IST
Last Updated 13 ಮಾರ್ಚ್ 2020, 7:38 IST
ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್
ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್   

ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹಾಗೂ ಇತರೆ ನಾಲ್ಕು ಮಂದಿ ಆರೋಪಿತರಿಗೆ ಮತ್ತೊಂದು ಪ್ರಕರಣದಲ್ಲಿ10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯ ಶುಕ್ರವಾರ ತೀರ್ಪುನೀಡಿದೆ.

ಉದ್ದೇಶವಲ್ಲದ ಮಾನವ ಹತ್ಯೆ(ಐಪಿಸಿ ಸೆಕ್ಷನ್ 304), ಅಪರಾಧಸಂಚು (120ಬಿ), ಅಕ್ರಮ ಬಂಧನ(341) , ಹಲ್ಲೆ (323) ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದರವಿರುದ್ದ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ಕುಲದೀಪ್ ಸಿಂಗ್ ಸೋದರ ಜೈದೀಪ್ ಅಲಿಯಾಸ್ ಅತುಲ್ ಸಿಂಗ್ಇಬ್ಬರೂ ತಲಾ ₹10ಲಕ್ಷ ಹಣವನ್ನು ಪರಿಹಾರವಾಗಿ ಸಂತ್ರಸ್ತೆಯ ಕುಟುಂಬಕ್ಕೆನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

ADVERTISEMENT

ಕುಲದೀಪ್ ಸಿಂಗ್, ಆತನ ಸೋದರ ಅತುಲ್ ಸಿಂಗ್, ಇಬ್ಬರು ಪೊಲೀಸರೂ ಸೇರಿದಂತೆ 7 ಮಂದಿ ವಿರುದ್ದ ಬುಧವಾರ ತೀರ್ಪು ಪ್ರಕಟಿಸಿದೆ.

ಆರೋಪಿ ಕುಲದೀಪ್ ಸಿಂಗ್ 2017ರಲ್ಲಿ 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ, ಇದಲ್ಲದೆ, ಬಾಲಕಿಯ ತಂದೆಯನ್ನು ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಿದ್ದರು. ನಂತರ ಆತ ಠಾಣೆಯಲ್ಲಿಯೇ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಸಾವಿನ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ಅಪ್ರಾಪ್ತ ಬಾಲಕಿಮೇಲೆ ಅತ್ಯಾಚಾರ ನಡೆಸಿರುವುದು ಹಾಗೂ ಬಾಲಕಿಯ ತಂದೆ ಸಾವು,ಎರಡೂ ಪ್ರಕರಣಗಳು ಪ್ರತ್ಯೇಕವಾಗಿ ದಾಖಲಾಗಿದ್ದವು.

ಉತ್ತರಪ್ರದೇಶದ ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯಉನ್ನಾವ್ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ನನ್ನು 2019ರ ಡಿಸೆಂಬರ್ ನಲ್ಲಿ ಜೈಲಿಗೆ ಕಳುಹಿಸಲು ಆದೇಶಿಸಿದೆ. ಅಲ್ಲದೆ,ಬಿಜೆಪಿಯ ಶಾಸಕನಾಗಿದ್ದ ಆರೋಪಿಯನ್ನು ಉತ್ತರ ಪ್ರದೇಶದ ವಿಧಾನಸಭಾ ಸದಸ್ಯತ್ವದಿಂದ ವಜಾಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.