ADVERTISEMENT

ಹೆರಾಯಿನ್ ಹೊಂದಿದ್ದ ಆರೋಪ: ಪಂಜಾಬ್‌ನ ಮಾಜಿ ಸಚಿವರ ಮಗ ಸೇರಿ 6 ಮಂದಿ ಬಂಧನ

ಪಿಟಿಐ
Published 10 ಏಪ್ರಿಲ್ 2024, 4:46 IST
Last Updated 10 ಏಪ್ರಿಲ್ 2024, 4:46 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಶಿಮ್ಲಾ: ಪಂಜಾಬ್‌ನ ಮಾಜಿ ಸಚಿವ ಸುಚಾ ಸಿಂಗ್ ಅವರ ಮಗ ಸೇರಿದಂತೆ 6 ಮಂದಿಯನ್ನು ಹೆರಾಯಿನ್ ಇಟ್ಟುಕೊಂಡಿದ್ದ ಆರೋಪದಡಿ ಹಿಮಾಚಲ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಶಿಮ್ಲಾದ ಪಂಚಾಯತ್ ಘರ್ ಬಳಿ ಹೋಟೆಲ್ ಕೊಠಡಿಯೊಂದರ ಮೇಲೆ ದಾಳಿ ನಡೆಸಿದ ಪೊಲಲೀಸರ ತಂಡ ವಶಕ್ಕೆ ಪಡೆದಿದೆ ಎಂದು ಎಸ್‌ಪಿ ಸಂಜೀವ್ ಕುಮಾರ್ ಗಾಂಧಿ ಹೇಳಿದ್ದಾರೆ.

ADVERTISEMENT

ಬಂಧಿತರ ಪೈಕಿ ಪ್ರಕರಣದ ಪ್ರಮುಖ ಆರೋಪಿ ಪ್ರಕಾಶ್ ಸಿಂಗ್(37) ಪಂಜಾಬ್‌ನ ಮಾಜಿ ಸಚಿವ ಸುಚಾ ಸಿಂಗ್ ಅವರ ಮಗ. ಉಳಿದ ನಾಲ್ವರು ಆರೋಪಿಗಳು ಅಜಯ್ ಕುಮಾರ್(27), ಶುಭಂ ಕೌಶಲ್(26) ಮತ್ತು ಬಲಬಿಂದರ್(26) ಪಂಜಾಬ್ ಮೂಲದವರು. 19 ವರ್ಷದ ಅಬ್ನಿ ಕಿನೌರ್ ಜಿಲ್ಲೆಗೆ ಸೇರಿದವನಾಗಿದ್ದಾನೆ.

ಎನ್‌ಡಿಪಿಎಸ್ ಕಾಯ್ದೆ ಅಡಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆಯೂ ಡ್ರಗ್ಸ್ ಸರಬರಾಜು ಮತ್ತು ಸೇವನೆ ಆರೋಪದಡಿ ಗುರುದಾಸ್‌ಪುರದಲ್ಲಿ ಪ್ರಕಾಶ್ ಸಿಂಗ್ ಬಂಧನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.