ADVERTISEMENT

ದೆಹಲಿ ಮಾಲಿನ್ಯ: ಕೇಂದ್ರ, ರಾಜ್ಯಗಳಿಂದ ಒಮ್ಮತದ ಸೂತ್ರ ಅಗತ್ಯ– ವೆಂಕಯ್ಯನಾಯ್ಡು

ಪಿಟಿಐ
Published 8 ನವೆಂಬರ್ 2023, 9:47 IST
Last Updated 8 ನವೆಂಬರ್ 2023, 9:47 IST
<div class="paragraphs"><p>ವೆಂಕಯ್ಯನಾಯ್ಡು</p></div>

ವೆಂಕಯ್ಯನಾಯ್ಡು

   

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಪಕ್ಕದ ರಾಜ್ಯ ಸರ್ಕಾರಗಳು ಒಮ್ಮತದ ಸೂತ್ರವನ್ನು ಕಂಡುಕೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಬುಧವಾರ ಹೇಳಿದ್ದಾರೆ.

ಇಲ್ಲಿ ಅವರು ಕೆಲವು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ADVERTISEMENT

ದೆಹಲಿಯಲ್ಲಿ ವಾಯುಮಾಲಿನ್ಯ ನಿಭಾಯಿಸಲು ತುರ್ತು ಕ್ರಮಗಳಿಗಾಗಿ ಅವರು ಸರ್ಕಾರಕ್ಕೆ ಕರೆ ನೀಡಿದರು. ವಾಯುಮಾಲಿನ್ಯ ಯುವಕರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಇದು ಗಂಭೀರ ವಿಷಯವಾಗಿದೆ ಎಂದರು.

ರಾಜಧಾನಿಯಲ್ಲಿ ಚಳಿಗಾಲದ ವೇಳೆ ವಾಯುಮಾಲಿನ್ಯ ಸಮಸ್ಯೆ ತೀವ್ರ ಹೆಚ್ಚಳವಾಗುತ್ತಿರುವುದು ಗಂಭೀರ ವಿಷಯವಾಗಿದೆ. ವಾಯುಮಾಲಿನ್ಯ ನಿವಾರಣೆ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ವೆಂಕಯ್ಯನಾಯ್ಡು ಹೇಳಿದರು.

ಇದು ದೆಹಲಿ ಸರ್ಕಾರದ ಕರ್ತವ್ಯವಾಗಿದ್ದರೂ, ಈ ಸಮಸ್ಯೆಯನ್ನು ನಿಭಾಯಿಸಲು ಸಮಯ ಮಿತಿ ಆಧಾರಿತ ಯೋಜನೆ ರೂಪಿಸುವುದು ಅಗತ್ಯವಾಗಿದೆ. ಕೇಂದ್ರ ಸರ್ಕಾರ ಸೇರಿದಂತೆ ದೆಹಲಿ ಪಕ್ಕದ ರಾಜ್ಯ ಸರ್ಕಾರಗಳು ಇದಕ್ಕೆ ಜವಾಬ್ದಾರಿಯಾಗಿವೆ ಎಂದು ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ರಾಜ್ಯ ಸರ್ಕಾರಗಳ ಸಮನ್ವಯ, ಸಹಕಾರದ ಸೂತ್ರ ಅಗತ್ಯವಿದೆ. ಎಲ್ಲರೂ ಒಟ್ಟಾಗಿ ವಾಯುಮಾಲಿನ್ಯ ಸಮಸ್ಯೆ ಪರಿಹಾರಕ್ಕೆ  ಒಮ್ಮತದ ಸೂತ್ರವನ್ನು ರೂಪಿಸಲು ನಾನು ಸರ್ಕಾರಗಳಿಗೆ ಮನವಿ ಮಾಡುತ್ತೇನೆ ಎಂದರು. ‌

ನೆರೆ ರಾಜ್ಯಗಳ ಸರ್ಕಾರದ ವಿರುದ್ಧ ಎಎಪಿ ಆರೋಪ

ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಪಕ್ಕದ ಪಂಜಾಂಬ್‌, ಹರಿಯಾಣ, ಉತ್ತರಪ್ರದೇಶ ಸರ್ಕಾರಗಳೇ ಕಾರಣ ಎಂದು ಎಎಪಿ ಆಕ್ಷೇಪ ವ್ಯಕ್ತಪಡಿಸಿದೆ.

ಎಎಪಿ ಆರೋಪಕ್ಕೆ ಪಂಜಾಬ್‌, ಹರಿಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಪಂಚಾಬ್‌, ಹರಿಯಾಣ, ಉತ್ತರ ಪ್ರದೇಶದ ಗಡಿಗಳಲ್ಲಿ ಕೃಷಿ ತ್ಯಾಜ್ಯ ಸುಡುವುದು ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ನಿನ್ನೆ ಸುಪ್ರಿಂ ಕೋರ್ಟ್‌ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಕೃಷಿ ತ್ಯಾಜ್ಯ ಸುಡುವುದನ್ನು ತಡೆಯಬೇಕು ಎಂದು ನಿರ್ದೇಶಿಸಿದೆ. ವಾತಾವರಣವು ವರ್ಷದಿಂದ ವರ್ಷಕ್ಕೆ ಹೀಗೆ ಹಾಳಾಗಲು ಬಿಡಬಾರದು ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.