ADVERTISEMENT

ಇನ್ಮುಂದೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪರೀಕ್ಷೆ ಕನ್ನಡ ಸೇರಿ 13 ಭಾಷೆಯಲ್ಲಿ

ಪಿಟಿಐ
Published 15 ಏಪ್ರಿಲ್ 2023, 11:52 IST
Last Updated 15 ಏಪ್ರಿಲ್ 2023, 11:52 IST
ಸಿಆರ್‌ಪಿಎಫ್ ಯೋಧರು
ಸಿಆರ್‌ಪಿಎಫ್ ಯೋಧರು   

ನವದೆಹಲಿ: ಇನ್ಮುಂದೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ನಡೆಯುವ ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಇಂಗ್ಲಿಷ್ ಜೊತೆಗೆ ಇತರ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬಹುದು.

ಹೌದು, ಈ ಕುರಿತು ಶನಿವಾರ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಆದೇಶ ಹೊರಡಿಸಿದ್ದಾರೆ.

ದೇಶದ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸ್ಥಳೀಯ ಯುವಕರೂ ಹೆಚ್ಚು ಪಾಲ್ಗೊಳ್ಳಲಿ ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾತೃಭಾಷೆಯಲ್ಲಿ ಪರೀಕ್ಷೆ ಎದುರಿಸುವ ಲಕ್ಷಾಂತರ ಸ್ಪರ್ಧಾಳುಗಳಿಗೆ ಇದು ನೆರವಾಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕೇಂದ್ರ ಗೃಹ ಇಲಾಖೆ ಅಡಿ ಬರುವ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿ ಮತ್ತರು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್–ಎನ್‌ಎಸ್‌ಜಿ ಹುದ್ದೆಗಳ ಕಾನ್‌ಸ್ಟೆಬಲ್ ಜಿಡಿ ಪರೀಕ್ಷೆಗಳಿಗೆ ಈ ಆದೇಶ ಅನ್ವಯ ಆಗುತ್ತದೆ.

ಈ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಯಲ್ಲೂ ನಡೆಸಬೇಕು ಎಂದು ದಕ್ಷಿಣ ಭಾರತದ ಅನೇಕ ಹೋರಾಟಗಾರರು, ರಾಜಕೀಯ ಮುಖಂಡರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ಹೊಸ ಆದೇಶದ ಪ್ರಕಾರ ಇಂಗ್ಲಿಷ್ ಹಿಂದಿ ಜೊತೆಗೆ ಈ ಕೆಳಗಿನ 13 ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ.

ಕನ್ನಡ

ಅಸ್ಸಾಮಿ

ಬೆಂಗಾಳಿ

ಗುಜರಾತಿ

ಮರಾಠಿ

ಮಲಯಾಳಂ

ತಮಿಳು

ತೆಲುಗು

ಒಡಿಯಾ

ಉರ್ದು

ಪಂಜಾಬಿ

ಮಣಿಪುರಿ

ಕೊಂಕಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.