ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಅರ್ಜಿ ಇಂದು ವಿಚಾರಣೆ

ಪಿಟಿಐ
Published 5 ಆಗಸ್ಟ್ 2024, 0:15 IST
Last Updated 5 ಆಗಸ್ಟ್ 2024, 0:15 IST
<div class="paragraphs"><p>ಮನೀಶ್ ಸಿಸೋಡಿಯಾ</p></div>

ಮನೀಶ್ ಸಿಸೋಡಿಯಾ

   

(ಸಂಗ್ರಹ ಚಿತ್ರ)

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ತಮಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಎಎ‍ಪಿ ನಾಯಕ ಮನೀಶ್ ಸಿಸೋಡಿಯಾ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸುವ ನಿರೀಕ್ಷೆ ಇದೆ.

ADVERTISEMENT

ಹೆಚ್ಚುವಟಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸಿಬಿಐ ಹಾಗೂ ಇ.ಡಿ. ಪರವಾಗಿ ಹಾಜರಾಗಿ, ಸಿಸೋಡಿಯಾ ಸಲ್ಲಿಸಿರುವ ಅರ್ಜಿಗಳಿಗೆ ಆಕ್ಷೇಪ ದಾಖಲಿಸಿದ್ದರು. ದೆಹಲಿ ಹೈಕೋರ್ಟ್ ಆದೇಶವನ್ನು ಸಿಸೋಡಿಯಾ ಅವರು ಎರಡನೆಯ ಬಾರಿ ಪ್ರಶ್ನಿಸುತ್ತಿದ್ದಾರೆ, ಒಂದೇ ಆದೇಶವನ್ನು ಎರಡು ಬಾರಿ ಪ್ರಶ್ನಿಸಲು ಅವಕಾಶ ಇಲ್ಲ ಎಂದು ರಾಜು ಅವರು ವಿಭಾಗೀಯ ಪೀಠಕ್ಕೆ ವಿವರಿಸಿದ್ದರು.

ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಿಸೋಡಿಯಾ ಪಾತ್ರ ಇದೆ ಎಂದು ಆರೋಪಿಸಿ ಸಿಬಿಐ 2023ರ ಫೆಬ್ರುವರಿಯಲ್ಲಿ ಅವರನ್ನು ಬಂಧಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.