ADVERTISEMENT

ಅಬಕಾರಿ ಹಗರಣ | ಎಎಪಿ ಕೂಡ ಆರೋಪಿ: ಕೋರ್ಟ್‌ಗೆ ಇ.ಡಿ ಹೇಳಿಕೆ

ಪಿಟಿಐ
Published 14 ಮೇ 2024, 15:22 IST
Last Updated 14 ಮೇ 2024, 15:22 IST
<div class="paragraphs"><p>ಎಎಪಿ</p></div>

ಎಎಪಿ

   

(ರಾಯಿಟರ್ಸ್ ಚಿತ್ರ)

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಆರೋಪಿಯಾಗಿ ಹೆಸರಿಸಲಾಗುವುದು ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ದೆಹಲಿ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿತು..

ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಜಾಮೀನು ನೀಡುವುದನ್ನು ವಿರೋಧಿಸುವ ಸಂದರ್ಭದಲ್ಲಿ ಇ.ಡಿ ಪರ ವಕೀಲರು ಕೋರ್ಟ್‌ಗೆ ಈ ಕುರಿತು ಮಾಹಿತಿ ನೀಡಿದರು.  

ಪ್ರಕರಣ ಕುರಿತು ದೋಷಾರೋಪ ಪಟ್ಟಿ ಸಲ್ಲಿಸುವಾಗ ಎಎಪಿ ಅನ್ನೂ ಸಹ ಆರೋಪಿಯಾಗಿ ಹೆಸರಿಸಲಾಗುವುದು ಎಂದು ವಕೀಲರು ಈ ಪ್ರಕರಣದ ವಾದವನ್ನು ಆಲಿಸಿದ ನ್ಯಾಯಮೂರ್ತಿ ಸ್ವರಣಕಾಂತಾ ಶರ್ಮಾ ಅವರಿಗೆ ತಿಳಿಸಿದರು.

ಸಿಸೋಡಿಯಾ ಅವರಿಗೆ ಜಾಮೀನು ನೀಡಬೇಕು ಎಂದು ವಾದಿಸಿದ ಅವರ ‍ಪರ ವಕೀಲರು, ‘ಹಣ ಅಕ್ರಮ ವರ್ಗಾವಣೆ ಹಾಗೂ ಭ್ರಷ್ಟಾಚಾರ ಪ್ರಕರಣ ಸಂಬಂಧ ಇ.ಡಿ. ಇನ್ನೂ ಜನರನ್ನು ಬಂಧಿಸುತ್ತಿದೆ. ವಾದ ಮುಗಿಯುವ ಯಾವುದೇ ಸೂಚನೆಗಳಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.