ADVERTISEMENT

ವರ್ಚುವಲ್‌ ರ‍್ಯಾಲಿ, ಆನ್‌ಲೈನ್‌ ಮತದಾನ ಸಾಧ್ಯವೇ?: ಉತ್ತರಾಖಂಡ ಹೈಕೋರ್ಟ್‌

ಪಿಟಿಐ
Published 6 ಜನವರಿ 2022, 18:09 IST
Last Updated 6 ಜನವರಿ 2022, 18:09 IST
ಉತ್ತರಾಖಂಡ ಹೈಕೋರ್ಟ್‌
ಉತ್ತರಾಖಂಡ ಹೈಕೋರ್ಟ್‌   

ನೈನಿತಾಲ್‌: ಉತ್ತರಾಖಂಡ ವಿಧಾನಸಭೆ ಚುನಾವಣೆಯ ರ‍್ಯಾಲಿಗಳನ್ನು ವರ್ಚುವಲ್‌ ಆಗಿ ನಡೆಸಲು ಮತ್ತು ಮತದಾನವನ್ನು ಆನ್‌ಲೈನ್‌ ಮೂಲಕ ನಡೆಸಲು ಸಾಧ್ಯವೇ ಎಂದು ಉತ್ತರಾಖಂಡ ಹೈಕೋರ್ಟ್‌ ಚುನಾವಣಾ ಆಯೋಗವನ್ನು ಕೇಳಿದೆ.

ಕೋವಿಡ್‌ ಪ್ರಕರಣ ಏರಿಕೆ ಕಂಡುಬರುತ್ತಿರುವ ಕಾರಣ ವಿಧಾನಸಭೆ ಚುನಾವಣೆಯನ್ನು ಮುಂದೂಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಮಿಶ್ರಾ ಮತ್ತು ನ್ಯಾಯಮೂರ್ತಿ ಎನ್‌.ಎಸ್‌. ಧನಿಕ್‌ ಅವರಿದ್ದ ಪೀಠವು ಆಯೋಗಕ್ಕೆ ಈ ಕುರಿತು ಪ್ರಶ್ನಿಸಿದೆ.

ಚುನಾವಣಾ ರ‍್ಯಾಲಿಗಳಿಗೆ ಪರ್ಯಾಯ ಕಂಡುಕೊಳ್ಳುವ ಅಥವಾ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಕೋರ್ಟ್‌ನಲ್ಲಿ ಬಾಕಿ ಇರುವಂತೆಯೇ ಉತ್ತರಾಖಂಡದಲ್ಲಿ ಚುನಾವಣಾ ರ‍್ಯಾಲಿಗಳನ್ನು ನಡೆಸಲಾಗುತ್ತಿದೆ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.