ADVERTISEMENT

ಉಕ್ರೇನ್ ಯುದ್ಧದ ಪರಿಣಾಮ ಹಣದುಬ್ಬರ ಮತ್ತು ಆಹಾರ ಕೊರತೆ: ಎಸ್‌. ಜೈಶಂಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2022, 6:52 IST
Last Updated 10 ಜೂನ್ 2022, 6:52 IST
ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್
ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್    

ಬೆಂಗಳೂರು: ಉಕ್ರೇನ್ ಯುದ್ಧದ ಪರಿಣಾಮ, ಜಾಗತಿಕವಾಗಿ ಹಣದುಬ್ಬರ ಏರಿಕೆ ಮತ್ತು ಆಹಾರದ ಕೊರತೆಗೆ ಕಾರಣವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಹೇಳಿದ್ದಾರೆ.

ಜಾಗತಿಕವಾಗಿ ಇಂಧನ, ಆಹಾರ ಮತ್ತು ರಸಗೊಬ್ಬರ ಸಮಸ್ಯೆಗೆ ಉಕ್ರೇನ್ ಯುದ್ಧ ಕಾರಣವಾಗಿದೆ. ಇದರಿಂದ, ಹಣದುಬ್ಬರದ ಜತೆಗೆ, ಆಹಾರದ ಕೊರತೆಯೂ ಜನರನ್ನು ಕಾಡಬಹುದು ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್‌ ಸೈನ್ಸನ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಯುದ್ಧದ ಪರಿಣಾಮ ಉಂಟಾಗಿರುವ ರಸಗೊಬ್ಬರದ ಕೊರತೆಯು ಪರೋಕ್ಷವಾಗಿ ಸಮಸ್ಯೆ ಸೃಷ್ಟಿಸಬಹುದು. ಅದರಿಂದ ಮುಂದೆ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಹುದು. ಇದು ಆಹಾರದ ಕೊರತೆಗೆ ದಾರಿ ಮಾಡಿಕೊಡಬಹುದು ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.