ADVERTISEMENT

ಇಂದು ಅಧಿಕಾರದಲ್ಲಿ ಇರುವವರು.. ಜಾಮೀನಿನ ನಂತರ ಮೊಹಮ್ಮದ್ ಜುಬೈರ್‌ ಮೊದಲ ಟ್ವೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2022, 16:18 IST
Last Updated 28 ಜುಲೈ 2022, 16:18 IST
ಮೊಹಮ್ಮದ್ ಜುಬೈರ್‌
ಮೊಹಮ್ಮದ್ ಜುಬೈರ್‌    

ನವದೆಹಲಿ: ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ನಂತರ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ಅವರು ಗುರುವಾರ ತಮ್ಮ ಮೊದಲ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಜುಲೈ 20ರಂದು ಜುಬೈರ್‌ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.

‍ಪೊಲೀಸರ ವಶದಲ್ಲಿದ್ದಾಗ ತಮ್ಮ ಪರ ನಿಂತ ಹಿತೈಷಿಗಳಿಗೆ ಜುಬೈರ್‌ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪ್ರಸಿದ್ಧ ಉರ್ದು ಸಾಹಿತಿ ರಾಹತ್‌ ಇಂದೋರಿಯವರ ಶಾಯಿರಿಯೊಂದಿಗೆ ಟ್ವೀಟ್‌ ಅನ್ನು ಪ್ರಾರಂಭಿಸಿರುವ ಅವರು, ‘ಇಂದು ಅಧಿಕಾರದ ಗದ್ದುಗೆಯಲ್ಲಿ ಇರುವವರು ನಾಳೆ ಇರುವುದಿಲ್ಲ. ಎಲ್ಲರಿಗೂ ಧನ್ಯವಾದಗಳು. ಕಳೆದ ಒಂದು ತಿಂಗಳಲ್ಲಿ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇರುವ ಹಿತೈಷಿಗಳಿಂದ ನಾನು ಅಪಾರ ಬೆಂಬಲವನ್ನು ಪಡೆದಿದ್ದೇನೆ. ನಿಮಗೆಲ್ಲ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಬೆಂಬಲ ನನಗೆ ಮತ್ತು ನನ್ನ ಕುಟುಂಬಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜೂನ್‌ 27ರಂದು ದೆಹಲಿ ಪೊಲೀಸರು ಜುಬೈರ್‌ ಅವರನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.