ADVERTISEMENT

ನನ್ನನ್ನು ಮುಗಿಸಲು ಫಡಣವೀಸ್‌ ಯತ್ನ: ಮರಾಠ ಮೀಸಲಾತಿ ಹೋರಾಟಗಾರ ಜಾರಂಗೆ ಆರೋಪ

ಪಿಟಿಐ
Published 25 ಫೆಬ್ರುವರಿ 2024, 10:34 IST
Last Updated 25 ಫೆಬ್ರುವರಿ 2024, 10:34 IST
<div class="paragraphs"><p>ಮನೋಜ್ ಜಾರಂಗೆ ಮತ್ತು ದೇವೇಂದ್ರ ಫಡಣವೀಸ್‌</p></div>

ಮನೋಜ್ ಜಾರಂಗೆ ಮತ್ತು ದೇವೇಂದ್ರ ಫಡಣವೀಸ್‌

   

ಮುಂಬೈ: ‘ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್‌ ಜರಾಂಗೆ ಪಾಟೀಲ್‌ ಅವರು ಭಾನುವಾರ ಆರೋಪಿಸಿದ್ದಾರೆ.

ಜಾಲ್ನಾ ಜಿಲ್ಲೆಯ ಅಂತರ್‌ವಾಲಿ ಸಾರಥಿ ಗ್ರಾಮದಲ್ಲಿ ಮಾಡಿದ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಜರಾಂಗೆ, ಫಡಣವೀಸ್‌ ಅವರ ವಿರುದ್ಧ ಹೀಗೆ ಆರೋಪಗಳನ್ನು ಮಾಡಿದರು. ಇದನ್ನು ಕೇಳಿ ಅವರ ಬೆಂಬಲಿಗರೂ  ಚಕಿತಗೊಂಡರು. 

ADVERTISEMENT

‘ನನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವಂತೆ ಕೆಲವು ಜನರನ್ನು ಒತ್ತಾಯಿಸಲಾಗುತ್ತಿದೆ. ಈ ಸಂಚಿನ ಹಿಂದೆ ಫಡಣವೀಸ್‌ ಅವರಿದ್ದಾರೆ. ನಾನು ಮುಂಬೈವರೆಗೆ ಮೆರವಣಿಗೆ ಹೋಗಿ, ಫಡಣವೀಸ್‌ ಅವರ ಸಾಗರ್‌ ಬಂಗಲೆಯ ಮುಂದೆ ಪ್ರತಿಭಟನೆ ನಡೆಸಲು ಕೂಡ ಸಿದ್ಧನಿದ್ಧೇನೆ’ ಎಂದು ತಿಳಿಸಿದರು.

ಜರಾಂಗೆ ಅವರ ಹೇಳಿಕೆ ಕೇಳಿ ಸ್ಥಳದಲ್ಲಿ ಸೇರಿದ ಅಂಖ್ಯಾತ ಬೆಂಬಲಿಗರಲ್ಲಿ ಅನೇಕರು ಗೊಂದಲಕ್ಕೆ ಒಳಗಾದರು. ಕೆಲವರು ಅವರ ಮೈಕ್ರೊಫೋನ್‌ ಕಿತ್ತುಕೊಳ್ಳಲು ಯತ್ನಿಸಿದರು. ಈ ಸಂದರ್ಭ, ‘ನಾನೊಬ್ಬನೇ ಮುಂಬೈವರೆಗೆ ಕಾಲು ನಡಿಗೆಯಲ್ಲಿ ಹೋಗುತ್ತೇನೆ. ನನಗೆ ಒಂದು ಕೋಲಿನ ನೆರವು ಸಾಕು’ ಎಂದು ಆಗ ಜರಾಂಗೆ ಹೇಳಿದರು.

ಜಾರಂಗೆ ಆರೋಪಕ್ಕೆ ಬಿಜೆಪಿ ತಿರುಗೇಟು

ಜಾರಂಗೆ ಆರೋಪಗಳಿಗೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ನಿತೇಶ್ ರಾಣೆ, ‘ಫಡಣವೀಸ್‌ ಅವರನ್ನು ಮುಟ್ಟಬೇಕಾದರೆ ಅವರ ಕಾರ್ಯಕರ್ತರ ಬೃಹತ್‌ ಗೋಡೆಯನ್ನು ದಾಟಿ ಹೋಗಬೇಕಿದೆ. ಮೀಸಲಾತಿ ಹೋರಾಟಗಾರ ಇದೀಗ ಸ್ಕ್ರೀಪ್ಟ್‌ ಓದುತ್ತಿದ್ದಾರೆ’ ಎಂದರು.

‘ಮರಾಠ ಸಮುದಾಯಕ್ಕೆ ರಾಜ್ಯ ಸರ್ಕಾರ ಶೇ10ರಷ್ಟು ಮೀಸಲಾತಿ ನೀಡಿದ ಮೇಲೂ ಯಾಕೆ ಪ್ರತಿಭಟನೆ ಮುಂದುವರಿಸುತ್ತಿದ್ದಾರೆ? ಫಡಣವೀಸ್ ಅವರು 5 ವರ್ಷ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಏನು ಅಂತ ಜನರಿಗೆ ಗೊತ್ತಿದೆ. ಜಾರಂಗೆ ಅವರ ಪೊಳ್ಳು ಆರೋಪಗಳಿಂದ ಫಡಣವೀಸ್ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವುದಿಲ್ಲ. ಜಾರಂಗೆ ನಿಜ ಬಣ್ಣ ಈಗ ಬಯಲಾಗುತ್ತಿದೆ’ ಎಂದು ಬಿಜೆಪಿ ಶಾಸಕ ಅತುಲ್ ಭಟ್ಕಳಕರ್ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.