ADVERTISEMENT

ಆಗಸ್ಟ್‌ 21ರವರೆಗೆ ಪೂಜಾ ಬಂಧಿಸಬೇಡಿ: ದೆಹಲಿ ಹೈಕೋರ್ಟ್‌

ಪಿಟಿಐ
Published 12 ಆಗಸ್ಟ್ 2024, 15:42 IST
Last Updated 12 ಆಗಸ್ಟ್ 2024, 15:42 IST
ಪೂಜಾ ಖೇಡ್ಕರ್‌
ಪೂಜಾ ಖೇಡ್ಕರ್‌   

ನವದೆಹಲಿ: ಹಿಂದುಳಿದ ವರ್ಗದ ಪ್ರಮಾಣಪತ್ರ ಹಾಗೂ ತಾನು ಅಂಗವಿಕಲೆ ಎಂದು ನಕಲಿ ದಾಖಲೆ ಸೃಷ್ಟಿಸಿ  ಐಎಎಸ್‌ ಹುದ್ದೆ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಐಎಎಸ್‌ ಪ್ರೊಬೇಷನರಿ ಅಧಿಕಾರಿಯಾಗಿದ್ದ ಪೂಜಾ ಖೇಡ್ಕರ್ ಅವರನ್ನು ಆಗಸ್ಟ್‌ 21ರವರೆಗೆ ಬಂಧಿಸಬಾರದು ಎಂದು ದೆಹಲಿ ಹೈಕೋರ್ಟ್‌ ಸೋಮವಾರ ಹೇಳಿದೆ.

ಪೂಜಾ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಪೊಲೀಸರು ಹಾಗೂ ಯುಪಿಎಸ್‌ಸಿಗೆ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್‌ ಅವರು ನೋಟಿಸ್‌ ನೀಡಿದರು. ‘ಪೂಜಾ ಅವರು ತನಿಖೆಗೆ ಸಹಕರಿಸಬೇಕು’ ಎಂದೂ ಅವರು ಹೇಳಿದರು. ಮುಂದಿನ ವಿಚಾರಣೆಯನ್ನು ಆಗಸ್ಟ್‌ 21ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT