ತಿರುವನಂತಪುರ: ಇಸ್ರೇಲ್ ಜತೆ ನಂಟಿರುವ ಸರಕು ಸಾಗಣೆಯ ಹಡಗನ್ನು ಇರಾನ್ ಸೇನೆಯು ಹಾರ್ಮುಜ್ ಜಲಸಂಧಿ ಬಳಿ ಶನಿವಾರ ವಶಪಡಿಸಿಕೊಂಡಿದೆ. ಇದರಲ್ಲಿ 17 ಮಂದಿ ಭಾರತೀಯರು ಇದ್ದಾರೆ.
ಪ್ರಸ್ತುತ ಹಡಗಿನಲ್ಲಿ ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಕೇರಳ ಮೂಲದವರಿದ್ದಾರೆ.
‘ಹಡಗಿನಲ್ಲಿರುವ ಧರ್ಣೇಶ್, ಭಾನುವಾರ ಮಧ್ಯಾಹ್ನ ನಮಗೆ ಕರೆ ಮಾಡಿ, ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ’ ಎಂದು ವಯನಾಡ್‌ನಲ್ಲಿರುವ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಹಡಗಿನಲ್ಲಿರುವ ಕೇರಳ ಮೂಲದ ಇತರರೂ ಸುರಕ್ಷಿತರಾಗಿದ್ದಾರೆ ಎಂದು ಅವರ ಕುಟುಂಬದವರಿಗೆ ಹಡಗು ಸಂಸ್ಥೆಯಾದ ಎಂಎಸ್‌ಸಿ ಏರೀಸ್ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಕೋಯಿಕ್ಕೋಡ್‌ನ ಶ್ಯಾಮನಾಥ್, ಪಾಲಕ್ಕಾಡ್‌ನ ಸುಮೇಶ್ ಮತ್ತು ತ್ರಿಶ್ಶೂರ್‌ನ ಆ್ಯನ್ ತೆಸಾ ಜೋಸೆಫ್ ಹಡಗಿನಲ್ಲಿರುವ ಇತರ ಕೇರಳ ಮೂಲದವರು.
ಈ ಬೆಳವಣಿಗೆ ಬೆನ್ನಲ್ಲೇ, ಇರಾನ್‌ನ ವಶದಲ್ಲಿರುವ ಭಾರತೀಯರನ್ನು ಕೇಂದ್ರ ಸರ್ಕಾರವು ಸುರಕ್ಷಿತವಾಗಿ ದೇಶಕ್ಕೆ ಕರೆತರುತ್ತದೆ ಎಂಬ ಭರವಸೆ ಅವರ ಕುಟುಂಬದ ಸದಸ್ಯರಲ್ಲಿ ಮನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.