ADVERTISEMENT

ಕೌಟುಂಬಿಕ ಕಲಹ: ಸಂಬಂಧಿಕರ ನಡುವಿನ ಜಗಳದಲ್ಲಿ ಮಹಿಳೆಯ ಮೂಗು ಕತ್ತರಿಸಿದರು!

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 11:51 IST
Last Updated 30 ಡಿಸೆಂಬರ್ 2018, 11:51 IST
   

ಜೈಪುರ: ರಾಜಸ್ಥಾನದ ಬಾಡ್ಮೇರ್ ಜಿಲ್ಲೆಯ ಧುಧು ಗ್ರಾಮದಲ್ಲಿ ಕೌಟುಂಬಿಕ ಕಲಹವೊಂದರ ವೇಳೆ ಮಹಿಳೆಯೊಬ್ಬರ ಮೂಗು ಕತ್ತರಿಸಿದ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ಗೆನಾನಿಂಯೊಂಕಾ ತಾಲಾ ಎಂಬಲ್ಲಿ ಭರೇರಾಮ್ ಜಾಟ್ ಅವರ ಪತ್ನಿ ಪುರೋದೇವಿ ಎಂಬವರ ಮೂಗು ಕತ್ತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಪುರೋ ದೇವಿ ತನ್ನ ಮಗಳನ್ನು ಲುಖು ಗ್ರಾಮದ ದರೇರಾಮ್ ಜಾಟ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು.ಮದುವೆಯಾದ ಕೆಲವು ತಿಂಗಳಲ್ಲಿಯೇ ಕೌಟುಂಬಿಕ ಜಗಳ ನಡೆದಾಗ ಪುರೋ ದೇವಿ ಮಗಳು ಗಂಡನ ಮನೆ ತೊರೆದು ತವರು ಮನೆ ಸೇರಿದ್ದಳು.

ಮೂರು ತಿಂಗಳ ಹಿಂದೆ ಪುರೋ ದೇವಿ ಅದೇ ಮಗಳನ್ನು ಬಚಾದು ಗ್ರಾಮದಲ್ಲಿನ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಕೊಟ್ಟಿದ್ದರು. ಇದನ್ನು ತಿಳಿದ ಪುರೋದೇವಿ ಅವರ ಮಗಳ ಮಾಜಿ ಪತಿಯ ಮನೆಯವರು ಗಲಾಟೆ ಮಾಡಿದ್ದಾರೆ.ಈ ವೇಳೆ ಪುರೋದೇವಿಯ ಗಂಡನಿಗೆ ಹೊಡೆದ ಹಳೇ ಬೀಗರ ಕುಟುಂಬ ಪುರೋದೇವಿಯ ಮೂಗು ಕತ್ತರಿಸಿದ್ದಾರೆ ಎಂದಿದ್ದಾರೆ ಪೊಲೀಸರು.

ADVERTISEMENT

ಘಟನೆಯ ಬಗ್ಗೆ ತಿಳಿದ ಕೂಡಲೇ ಪೊಲೀಸರು ಆಗಮಿಸಿ, ಪುರೋದೇವಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಪುರೋ ಅವರ ದೂರು ಪ್ರಕಾರ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ 307 ಮತ್ತು 458 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.