ಕೊಚ್ಚಿ: ಡಾ.ವಂದನಾ ದಾಸ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಅವರ ಕುಟುಂಬದವರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮೇ 10 ರಂದು ಕೊಟ್ಟಾರಕರ ತಾಲ್ಲೂಕು ಆಸ್ಪತ್ರೆಗೆ ಪೊಲೀಸರು ಚಿಕಿತ್ಸೆಗಾಗಿ ಕರೆತಂದಿದ್ದ ಆರೋಪಿಯೊಬ್ಬ ಕತ್ತರಿಯಿಂದ ಇರಿದು ವಂದನಾ ಅವರನ್ನು ಹತ್ಯೆ ಮಾಡಿದ್ದ.
‘ಕೊಟ್ಟಾರಕರ ಪೊಲೀಸರು ಎಫ್‌ಐಎಸ್ ತಿರುಚಿದ್ದಾರೆ ಮತ್ತು ತಮ್ಮ ಕಡೆಯಿಂದಾದ ಲೋಪವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ’ ಎಂದು ಅರ್ಜಿಯಲ್ಲಿ ವಂದನಾ ಅವರ ಕುಟುಂಬದವರು ಆರೋಪಿಸಿದ್ದಾರೆ.
‘ಈ ಪ್ರಕರಣದಲ್ಲಿ ಸಾಕ್ಷ್ಯ ನಾಶವಾಗುವುದಕ್ಕೂ ಮುನ್ನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದೂ ಅರ್ಜಿಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.