ADVERTISEMENT

ಜಗತ್ತಿಗೆ ಭಾರತವು ಕೌಟುಂಬಿಕ ವ್ಯವಸ್ಥೆಯ ಕೊಡುಗೆ ನೀಡಬಹುದು: ದತ್ತಾತ್ರೇಯ ಹೊಸಬಾಳೆ

ಪಿಟಿಐ
Published 8 ಜನವರಿ 2023, 21:19 IST
Last Updated 8 ಜನವರಿ 2023, 21:19 IST
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ   

ನಾಗ್ಪುರ: ‘ಕೌಟುಂಬಿಕ ಮೌಲ್ಯವನ್ನು ಕಾಪಾಡಿಕೊಳ್ಳಲು ಜಗತ್ತು ಹೆಣಗುತ್ತಿದೆ. ಆದ್ದರಿಂದ, ಜಗತ್ತಿಗೆ ಭಾರತವು ಉತ್ತಮ ಕೌಟುಂಬಿಕ ವ್ಯವಸ್ಥೆಯನ್ನು ಕೊಡುಗೆ ನೀಡಬಹುದು’ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.

ಆರ್‌ಎಸ್‌ಎಸ್‌ನಿಂದ ಪ್ರೇರಿತವಾದ ‘ವಿಶ್ವಮಾಂಗಲ್ಯ ಸಭಾ’ದ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅಮೆರಿಕವೂ ಸೇರಿ ಎಲ್ಲಾ ದೇಶಗಳು ತಾಯ್ತನವನ್ನು ಕಾಪಾಡಿಕೊಳ್ಳಲು ಚಿಂತಿಸುತ್ತಿದೆ. ಜಗತ್ತಿನ ಹಲವು ರಾಜಕೀಯ ಪಕ್ಷಗಳು ಕೌಟುಂಬಿಕ ಮೌಲ್ಯಗಳನ್ನು ಕಾಪಾಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ ಭಾರತವು ಕೌಟುಂಬಿಕ ವ್ಯವಸ್ಥೆಯನ್ನು ಜಗತ್ತಿಗೆ ಕೊಡುಗೆ ನೀಡಬಹುದು’ ಎಂದರು.

ADVERTISEMENT

‘ಜಗತ್ತಿಗೆ ಕೌಟುಂಬಿಕ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಬೇಕು ಅಂತಾದರೆ, ಮೊದಲು ನಾವು ಆದರ್ಶಪ್ರಾಯ ಸ್ಥಿತಿಯಲ್ಲಿರಬೇಕು. ಆದ್ದರಿಂದ ಜನರಿಗೆ ಕೌಟುಂಬಿಕ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಸಮಾಜದಲ್ಲಿ ಆದರ್ಶ ಕುಟುಂಬಗಳು ಹೆಚ್ಚಾಗುವಂತಾಗಬೇಕು’ ಎಂದರು.

‘ಅಂತರರಾಷ್ಟ್ರೀಯ ಯೋಗ ದಿನ, ಆಯುರ್ವೇದ ಹಾಗೂ ಸಂಸ್ಕೃತವನ್ನು ಭಾರತ ಜಗತ್ತಿಗೆ ಕೊಡುಗೆಯಾಗಿ ಕೊಟ್ಟಿದೆ. ಪರಿಸರ ಸಂರಕ್ಷಣೆಯನ್ನು ನಮ್ಮ ದೇಶ ಲಾಗಾಯ್ತಿನಿಂದಲೂ ಮಾಡಿಕೊಂಡು ಬರುತ್ತಿದೆ. ಇದರೊಂದಿಗೆ, ನಮ್ಮ ಸಂಸ್ಕೃತಿ ಹಾಗೂ ಧರ್ಮವನ್ನು ಕಾಪಾಡಿಕೊಳ್ಳಲು ಆಂದೋಲನದ ಅಗತ್ಯವಿದೆ’ ಎಂದರು.

ಕೋಟ್‌

ಭಾರತೀಯ ಸಂಸ್ಕೃತಿಯು ಧರ್ಮದ ಮೂಲಕ ಲೋಕ ಕಲ್ಯಾಣಕ್ಕಾಗಿಯೂ, ಜಗತ್ತಿನ ಕಲ್ಯಾಣಕ್ಕಾಗಿಯೂ ಕೆಲಸ ಮಾಡುತ್ತಿದೆ
ದತ್ತಾತ್ರೇಯ ಹೊಸಬಾಳೆ, ಆರ್‌ಎಸ್‌ಎಸ್‌ನ ಸರಕಾರ್ಯವಾಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.