ADVERTISEMENT

ಮತದಾನ ಮುಗಿದು ವಾರವಾದ ನಂತರ ಮತ ಚಲಾಯಿಸಲು ಕರೆಕೊಟ್ಟು ಟ್ರೋಲ್‌ ಆದ ನಟ ಫರ್ಹಾನ್‌

​ಪ್ರಜಾವಾಣಿ ವಾರ್ತೆ
Published 19 ಮೇ 2019, 11:21 IST
Last Updated 19 ಮೇ 2019, 11:21 IST
   

ನವದೆಹಲಿ: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮತದಾನ ಮುಗಿದು ಒಂದು ವಾರ ಕಳೆದ ನಂತರ ಇಂದು ಮತದಾನಕ್ಕೆ ಕರೆ ನೀಡಿ ಟ್ವೀಟ್‌ ಮಾಡಿರುವ ಬಾಲಿವುಡ್‌ ನಟ, ನಿರ್ದೇಶಕಫರ್ಹಾನ್‌ ಅಖ್ತರ್‌ ಸಾಮಾಜಿಕ ತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

‘ಭೋಪಾಲದ ಮತದಾರರೇ... ಇನ್ನೊಂದು ಮಹಾನ್‌ ಅನಿಲ ದುರಂತದಿಂದ ಭೋಪಾಲ ನಗರವನ್ನು ರಕ್ಷಿಸುವ ಸಮಯವಿದು,’ ಎಂದು ಅವರು ಭಾನುವಾರ ಬೆಳಗ್ಗೆ ಟ್ವೀಟ್‌ ಮಾಡಿದ್ದಾರೆ. ಆ ಟ್ವೀಟ್‌ನಲ್ಲಿ #SayNoToPragya #SayNoToGodse #RememberTheMahatma #ChooseLoveNotHate ಎಂಬ ಹ್ಯಾಷ್‌ ಟ್ಯಾಗ್‌ಗಳನ್ನು ಅವರು ಬಳಸಿದ್ದಾರೆ.

ಫರ್ಹಾನ್‌ ಅಖ್ತರ್‌ ಅವರ ಈ ಟ್ವೀಟ್‌ ಸದ್ಯ ಸಾಮಾಜಿಕ ತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದೆ. ‘ತೀರ ಮುಂಚೆಯೇ ಟ್ವೀಟ್‌ ಮಾಡಿದ್ದೀರಿ. 2024ಕ್ಕೆ ಇದೇ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿಕೊಳ್ಳಿ,’ ಎಂದು ಟ್ವೀಟಿಗರು ಗೇಲಿ ಮಾಡಿದ್ದಾರೆ.

ADVERTISEMENT

ಮಧ್ಯಪ್ರದೇಶದ ಭೋಪಾಲ್‌ ಲೋಕಸಭಾ ಕ್ಷೇತ್ರಕ್ಕೆ6ನೇ ಹಂತದಲ್ಲಿ (ಮೇ 12ರಂದು) ಮತದಾನ ನಡೆದಿತ್ತು. ಇಲ್ಲಿ ಕಾಂಗ್ರೆಸ್‌ನಿಂದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌, ಮಾಲೆಗಾಂವ್‌ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್‌ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.