ADVERTISEMENT

ಉತ್ತರಪ್ರದೇಶ: ಅತಿಯಾದ ಚಳಿಯಿಂದ ರೈತ ಸಾವು

ಪಿಟಿಐ
Published 21 ಡಿಸೆಂಬರ್ 2020, 7:41 IST
Last Updated 21 ಡಿಸೆಂಬರ್ 2020, 7:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಂಡಾ: ಉತ್ತರ ಪ್ರದೇಶದ ಪಂಚನೇಲಿಯಲ್ಲಿ 62 ವರ್ಷದ ರೈತರೊಬ್ಬರು ಚಳಿಯಿಂದಾಗಿ ಮೃತಪಟ್ಟಿದ್ಧಾರೆ.

‘ತಂದೆ ರಾಮ್‌ ಕಿಶೋರ್‌ ಅವರುಭಾನುವಾರ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅವರು ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದರು’ ಎಂದು ಅವರ ಮಗ ಸುಶೀಲ್ ತಿಳಿಸಿದ್ದಾರೆ ಎಂದು ‍ಪೊಲೀಸ್‌ ಅಧಿಕಾರಿ ಆರ್‌.ಕೆ ಸಿಂಗ್‌ ಅವರು ಹೇಳಿದರು.

ಅತಿಯಾದ ಚಳಿಯಿಂದಾಗಿ ಅವರು ಸಾವಿಗೀಡಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಸಾವಿನ ನಿಖರ ಕಾರಣವನ್ನು ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆಸ್ಪತ್ರೆ ತುರ್ತು ಸೇವಾ ಅಧಿಕಾರಿ ಡಾ.ಅಭಿಷೇಕ್ ಅವರು ಮಾಹಿತಿ ನೀಡಿದರು.

ADVERTISEMENT

ಉತ್ತರಪ್ರದೇಶದ ಹಲವು ಸ್ಥಳಗಳಲ್ಲಿ ಭಾನುವಾರ ತಾಪಮಾನ 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ. ರಾಜ್ಯದಲ್ಲಿ ಶೀತ ಅಲೆಯ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.