ನವದೆಹಲಿ: ‘ರೈತರು ತಿಂಗಳಾನುಗಟ್ಟಲೆ ನಡೆಸಿದ ಪ್ರತಿಭಟನೆಯಲ್ಲಿ ಹೆಣಗಳು ನೇತಾಡುತ್ತಿದ್ದವು. ಅತ್ಯಾಚಾರಗಳು ನಡೆದಿವೆ. ಬಾಂಗ್ಲಾದೇಶ ಮಾದರಿಯ ಅರಾಜಕತೆ ಸೃಷ್ಟಿಗೆ ಇಲ್ಲಿ ಯೋಜನೆ ನಡೆದಿತ್ತು’ ಎಂದು ಬಿಜೆಪಿ ಸಂಸದೆ ಕಂಗನಾ ರನೌತ್ ಹೇಳಿಕೆ ಈಗ ವಿವಾದದ ಕಿಡಿ ಹೊತ್ತಿಸಿದೆ.
ಸಂಸದೆಯ ಈ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ.
‘ಸೇನೆ ಹಾಗೂ ಪೊಲೀಸರು ಇಲ್ಲದಿದ್ದರೆ ಬಾಂಗ್ಲಾದೇಶದಲ್ಲಿ ನಡೆಯಿತಲ್ಲಾ ಅದು ಇಲ್ಲಿ ಸಂಭವಿಸಲು ಹೆಚ್ಚು ಸಮಯ ಬೇಕಿರಲಿಲ್ಲ. ರೈತರ ಮಸೂದೆ ವಾಪಾಸ್ ಪಡೆದ ನಂತರವೂ ಅವರು ಅಲ್ಲಿ ಕುಳಿತಿದ್ದರು. ಅವರಿಗೆ ಮಸೂದೆ ಹಿಂಪಡೆಯುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ’ ಎಂದಿದ್ದಾರೆ.
‘ಚೀನಾ, ಅಮೆರಿಕದಂತ ವಿದೇಶಿ ಶಕ್ತಿಗಳು ಇಂಥ ಹೋರಾಟಗಳ ಹಿಂದೆ ಕೆಲಸ ಮಾಡುತ್ತಿವೆ. ಆದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾದರೂ, ಸಿನಿಮಾದವರ ಅಂಗಡಿ ನಡೆಯುತ್ತಲೇ ಇರಬೇಕು ಎಂಬ ಧೋರಣೆ ಇವರದ್ದು. ಆದರೆ ದೇಶವೇ ಹಾಳಾದರೆ, ಇವರೂ ಹಾಳಾಗುತ್ತಾರೆ ಎಂಬ ಸತ್ಯವನ್ನು ಇವರಿಗೆ ನಿತ್ಯ ಮನವರಿಕೆ ಮಾಡಿಕೊಡಬೇಕಿದೆ’ ಎಂದು ಕಂಗನಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.