ADVERTISEMENT

ರೈತರ ಪ್ರತಿಭಟನೆ ರಾಜಕೀಯ ಸ್ವರೂಪದ್ದು: ಸಚಿವ ವಿ.ಕೆ.ಸಿಂಗ್

ಪಿಟಿಐ
Published 20 ಡಿಸೆಂಬರ್ 2020, 11:54 IST
Last Updated 20 ಡಿಸೆಂಬರ್ 2020, 11:54 IST
ವಿ.ಕೆ.ಸಿಂಗ್
ವಿ.ಕೆ.ಸಿಂಗ್   

ತಾಂಜಾವೂರು: ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಸ್ವರೂಪದಿಂದ ಕೂಡಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.

ರೈತರ ಕಲ್ಯಾಣವೇ ಎನ್‌ಡಿಎ ಸರ್ಕಾರದ ಮುಖ್ಯ ಉದ್ದೇಶ ಎಂದು ಅವರು ಹೇಳಿದ್ದಾರೆ.

ರೈತರ ಜತೆಗಿನ ಸಂವಾದಕ್ಕೂ ಮುನ್ನ ವರದಿಗಾರರ ಜತೆ ಮಾತನಾಡಿದ ಅವರು, ನಿಜವಾದ ರೈತರು ಕಳೆದ ಆರು ತಿಂಗಳುಗಳಲ್ಲಿ ಏನು ಮಾಡಲಾಗಿದೆಯೋ ಅದರ ಬಗ್ಗೆ ತುಂಬಾ ಸಂತಸಗೊಂಡಿದ್ದಾರೆ ಎಂದು ಹೇಳಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಆತಂಕ ನಿವಾರಿಸಲು ಅವರು ಯತ್ನಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ತಪ್ಪು ಮಾಹಿತಿ ಹರಡಲಾಗುತ್ತಿದೆ. ದೇಶದ ರೈತರು ನಿಜವಾಗಿ ಸಂತಸದಿಂದ ಇದ್ದಾರೆ. ಕಳೆದ ಆರು ತಿಂಗಳುಗಳಲ್ಲಿ ಏನೇನು ಮಾಡಲಾಗಿದೆಯೋ, ನಿಜವಾದ ರೈತರಿಗೆ ಅದರ ಬಗ್ಗೆ ಸಂತಸವಿದೆ. ಈಗ ನಡೆಯುತ್ತಿರುವ ಚಳವಳಿ ರಾಜಕೀಯ ಸ್ವರೂಪದ್ದು’ ಎಂದು ಸಿಂಗ್ ಹೇಳಿದ್ದಾರೆ.

ಈ ಮಧ್ಯೆ ಪಂಜಾಬ್, ಹರಿಯಾಣಗಳ ರೈತರು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.