ADVERTISEMENT

ಫೆ.29ರವರೆಗೆ ಫಾಸ್ಟ್ಯಾಗ್‌ ಖರೀದಿ ಶುಲ್ಕ ಮನ್ನಾ

ಪಿಟಿಐ
Published 13 ಫೆಬ್ರುವರಿ 2020, 19:19 IST
Last Updated 13 ಫೆಬ್ರುವರಿ 2020, 19:19 IST

ನವದೆಹಲಿ: ಈ ಮಾಸಾಂತ್ಯದವರೆಗೂ (ಫೆ.29) ಯಾವುದೇ ಶುಲ್ಕ ಪಾವತಿಸದೆ ಫಾಸ್ಟ್ಯಾಗ್‌ ಖರೀದಿಸಬಹುದು.ನಗದುರಹಿತ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಈ ನಿರ್ಧಾರ ಕೈಗೊಂಡಿದೆ.

‘ಫಾಸ್ಟ್ಯಾಗ್‌ಗೆ ಇದ್ದ ₹100 ಶುಲ್ಕವನ್ನು ಇದೇ 29ರವರೆಗೆ ಮನ್ನಾ ಮಾಡಲು ನಿರ್ಧರಿಸಲಾಗಿದೆ’ ಎಂದು ಎನ್‌ಎಚ್‌ಎಐ ತಿಳಿಸಿದೆ.

ವಾಹನ ಮಾಲೀಕರು ವಾಹನದ ನೋಂದಣಿ ಪ್ರಮಾಣ ಪತ್ರದೊಂದಿಗೆ (ಆರ್‌ಸಿ) ಯಾವುದೇ ಅಧಿಕೃತ ಫಾಸ್ಟ್ಯಾಗ್‌ ಮಾರಾಟಗಾರರ ಬಳಿಗೆ ಹೋಗಿ ಉಚಿತವಾಗಿ ಪಡೆಯಬಹುದು ಎಂದು ಎನ್‌ಎಚ್‌ಎಐ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.