ADVERTISEMENT

ಪೋಶೆ ಕಾರು ಅಪಘಾತ: ಆರೋಪಿಯ ತಂದೆ, ತಾತನ ವಿರುದ್ಧ ಮತ್ತೊಂದು ಪ್ರಕರಣ

ಪಿಟಿಐ
Published 7 ಜೂನ್ 2024, 15:48 IST
Last Updated 7 ಜೂನ್ 2024, 15:48 IST
<div class="paragraphs"><p>ಪೋಶೆ ಕಾರು ಅಪಘಾತ</p></div>

ಪೋಶೆ ಕಾರು ಅಪಘಾತ

   

ಪಿಟಿಐ ಚಿತ್ರ

ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ 17 ವರ್ಷದ ವಿಶಾಲ್ ಅಗರ್ವಾಲ್‌ನ ತಂದೆ ಹಾಗೂ ತಾತನ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿರುವ ಆರೋಪದ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ADVERTISEMENT

ಈ ಬಗ್ಗೆ ಇಲ್ಲಿನ ಚಂದ್ರನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಕುಮ್ಮಕ್ಕು ಹಾಗೂ ಜೀವ ಬೆದರಿಕೆ ಒಡ್ಡಿದ್ದರೆ ಎಂದು ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಉದ್ಯಮಿ ಡಿ.ಎಸ್. ಕಸ್ತೂರೆ ಎಂಬುವವರು ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ

ಕಟ್ಟಡ ನಿರ್ಮಾಣಕ್ಕಾಗಿ ವಿನಯ್ ಕಾಳೆ ಎಂಬಾತನಿಂದ ನನ್ನ ಮಗ ಶಶಿಕಾಂತ್ ಕಸ್ತೂರೆ ಸಾಲ ಪಡೆದಿದ್ದ. ಸಮಯಕ್ಕೆ ಸರಿಯಾಗಿ ಸಾಲ ತೀರಿಸಲು ಆಗಲಿಲ್ಲ. ಕಾಳೆ ತಾನು ಕೊಟ್ಟ ಸಾಲಕ್ಕೆ ಚಕ್ರಬಡ್ಡಿ ಕೇಳಲಾರಂಭಿಸಿದ್ದ. ನನ್ನ ಮಗ ಶಶಿಕಾಂತ್‌ಗೆ ಕಿರುಕುಳ ಕೊಡತೊಡಗಿದ್ದ. ಒತ್ತಡ ತಾಳಲಾರದೆ ಇದೇ ವರ್ಷ ಜನವರಿಯಲ್ಲಿ ಮಗ ಆತ್ಮಹತ್ಯೆ ಮಾಡಿಕೊಂಡ ಎಂದು ಡಿ.ಎಸ್. ಕಸ್ತೂರೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು. 

ವಿಚಾರಣೆ ನಡೆಸಿದಾಗ, ಪೋಶೆ ಅಪಘಾತ ಪ್ರಕರಣದ ಆರೋಪಿಯ ತಾತ, ತಂದೆ ಕೂಡ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಶಾಮೀಲಾಗಿರುವುದು ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

ಪೋಶೆ ಕಾರು ಚಾಲಕನಿಗೆ ತಾನೇ ಕಾರು ಚಲಾಯಿಸುತ್ತಿದ್ದಾಗಿ ಒಪ್ಪಿಕೊಂಡು, ಬಂಧನಕ್ಕೆ ಒಳಗಾಗುವಂತೆ ಒತ್ತಡ ಹಾಕಿದ್ದಕ್ಕೆ ಬಾಲಕನ ತಾತ ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಬಾಲಕನ ತಂದೆ ಕೂಡ ಜೈಲಿನಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.