ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘಿಸಿದ ಆರೋಪದ ಮೇಲೆ ಕರ್ನಾಟಕದ ಸ್ವಾಮಿ ವಿವೇಕಾನಂದ ಎಜುಕೇಷನಲ್ ಸೊಸೈಟಿ, ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಶನ್ ಸೇರಿದಂತೆ 1,807 ಸಂಸ್ಥೆಗಳ ನೋಂದಣಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.
‘ವಿದೇಶಗಳಿಂದ ಪಡೆಯಲಾದ ದೇಣಿಗೆ ಹಾಗೂ ವೆಚ್ಚಗಳ ಕುರಿತಂತೆ ವಾರ್ಷಿಕ ವರದಿಯನ್ನು ಸಲ್ಲಿಸಲು ವಿಫಲಗೊಂಡ ಕಾರಣ ಈ ಸಂಸ್ಥೆಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಮೂಲದ ಇನ್ಫೊಸಿಸ್ ಫೌಂಡೇಷನ್ ಸ್ವತಃ ಮನವಿ ಸಲ್ಲಿಸಿದ್ದ ಕಾರಣ ಈ ವರ್ಷ ಅದರ ನೋಂದಣಿಯನ್ನು ರದ್ದುಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.