ADVERTISEMENT

‘ನರಭಕ್ಷಕ‘ ಎಂದು ಗುಂಡಿಟ್ಟು ಕೊಲ್ಲಲಾಗಿದ್ದ ‘ಅವನಿ‘ ಹುಲಿಯ ಮರಿ ಅಭಯಾರಣ್ಯಕ್ಕೆ

ಪಿಟಿಐ
Published 6 ಮಾರ್ಚ್ 2021, 5:55 IST
Last Updated 6 ಮಾರ್ಚ್ 2021, 5:55 IST
ಅವನಿ ಹುಲಿ ಮೃತದೇಹ(ಪಿಟಿಐ–ಸಂಗ್ರಹ ಚಿತ್ರ)
ಅವನಿ ಹುಲಿ ಮೃತದೇಹ(ಪಿಟಿಐ–ಸಂಗ್ರಹ ಚಿತ್ರ)   

ನಾಗಪುರ: ‘ನರಭಕ್ಷಕ‘ ಎಂದು ಘೋಷಿಸಲ್ಪಟ್ಟು 2018ರ ಕಾರ್ಯಾಚರಣೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿದ್ದ ‘ಅವನಿ‘ ಹುಲಿಗೆ ಜನಿಸಿದ್ದ ಹೆಣ್ಣು ಮರಿಯೊಂದನ್ನು ಎರಡು ವರ್ಷಗಳ ನಂತರ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಪೆಂಚ್‌ ಹುಲಿ ಅಭಯಾರಣ್ಯದಲ್ಲಿ(ಪಿಟಿಆರ್‌)‌ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಟಿಆರ್‌ಎಫ್‌–84 ಎಂದು ನಾಮಕರಣ ಮಾಡಿರುವ ಈ ಹೆಣ್ಣು ಹುಲಿ ಮರಿಯನ್ನು ಶುಕ್ರವಾರ ಕಾಡಿಗೆ ಬಿಡಲಾಯಿತು ಎಂದು ಪಿಟಿಆರ್‌ನ ನಿರ್ದೇಶಕ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಂಧರ್ಕವಾಡ ಟೈಗ್ರೆಸ್‌ ಅವನಿ (ಪಿಕೆಟಿ -1) – ಈ ಹೆಣ್ಣು ಹುಲಿ ಮರಿಯನ್ನು ಡಿಸೆಂಬರ್ 2018 ರಿಂದ ಪಿಟಿಆರ್‌ನ ಟೈಟ್ರಾಲ್ಮಂಗಿಯಲ್ಲಿಟ್ಟು ಪೋಷಿಸಲಾಗುತ್ತಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ನಿಗದಿತ ಕಾರ್ಯವಿಧಾನಗಳ(ಎಸ್‌ಒಪಿ) ಅನುಸರಿಸುತ್ತಾ ಈ ಹೆಣ್ಣು ಹುಲಿ ಮರಿಯನ್ನು ಬೆಳೆಸಲಾಯಿತು ಎಂದು ತಿಳಿಸಿದೆ.

ADVERTISEMENT

ಸದ್ಯ ಆ ಹೆಣ್ಣು ಹುಲಿಗೆ 3 ವರ್ಷ 2 ತಿಂಗಳು.

ನರಭಕ್ಷಕ ಅವನಿ ಹುಲಿ ವಿರುದ್ಧದ ಕಾರ್ಯಾಚರಣೆ ನಂತರ, 2018ರ ಡಿಸೆಂಬರ್ 22ರಂದು ಪಿಟಿಆರ್‌ಗೆ ಪಿಕೆಟಿ–1 ಅನಾಥವಾಗಿದ್ದ ಹೆಣ್ಣು ಹುಲಿ ಮರಿಯನ್ನು ಕರೆತರಲಾಯಿತು.

ಮಹಾರಾಷ್ಟ್ರದಲ್ಲಿ 13 ಜನರ ಸಾವಿಗೆ ಕಾರಣವಾಗಿದ್ದ ಹೆಣ್ಣು ಹುಲಿ ಅವನಿಯನ್ನು ಯಾವತ್ಮಲ್‌ ಜಿಲ್ಲೆಯಲ್ಲಿ 2018 ರ ನವೆಂಬರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಈ ಹುಲಿಗೆ ಎರಡು ಮರಿಗಳು ಜನಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.