ADVERTISEMENT

ಲಾಲು ಪ್ರಸಾದ್‌ ಯಾದವ್‌ ಬಲಗಾಲಿನಲ್ಲಿ ಗುಳ್ಳೆಗಳು; ಆರೋಗ್ಯ ಸ್ಥಿತಿ ಗಂಭೀರ

ಏಜೆನ್ಸೀಸ್
Published 19 ನವೆಂಬರ್ 2018, 8:37 IST
Last Updated 19 ನವೆಂಬರ್ 2018, 8:37 IST
   

ರಾಂಚಿ: ಐಆರ್‌ಸಿಟಿಸಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಲಾಲು ಪ್ರಸಾದ್‌ ಯಾದವ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬಲಗಾಲಿನಲ್ಲಿ ಗುಳ್ಳೆಗಳು ಕಾಣಿಸಿಕೊಂಡು ನಡೆಯಲಾಗದ ಪರಿಸ್ಥಿತಿ ತಲುಪಿದ್ದಾರೆ.

ಯಾದವ್ ಅವರು ರಾಜೇಂದ್ರ ಇನ್‌ಸ್ಟಿಟ್ಯೂಟ್ಆಫ್ ಮೆಡಿಕಲ್‌ ಸೈನ್ಸ್ (ಆರ್‌ಐಎಮ್‌ಎಸ್‌) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವೈದ್ಯರುತಿಳಿಸಿದ್ದಾರೆ.

ಈ ಗುಳ್ಳೆಗಳ ಕಾರಣ ಕಳೆದೆರಡು ದಿನಗಳಿಂದ ಲಾಲೂ ಅವರ ದೇಹದಲ್ಲಿನ ಸಕ್ಕರೆಯ ಪ್ರಮಾಣ ಹಾಗೂ ರಕ್ತದೊತ್ತಡ ಹೆಚ್ಚಾಗಿತ್ತು. ಗುಳ್ಳೆಗಳು ಗುಣವಾಗಲು ಇನ್ನೂಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಆರ್‌ಐಎಮ್‌ಎಸ್‌ನ ವೈದ್ಯ ಉಮೇಶ್ ಪ್ರಸಾದ್ ತಿಳಿಸಿದ್ದಾರೆ.

ADVERTISEMENT

ಲಾಲೂ ಅವರು ನಿಂತುಕೊಳ್ಳಲಾಗದ ಹಾಗೂ ಕುಳಿತುಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರು
ನವದೆಹಲಿ:ಐಆರ್‌ಸಿಟಿಸಿ ಭ್ರಷ್ಟಾಚಾರ ಪ್ರಕರಣ ಸಂಬಂಧದ ವಿಚಾರಣೆ ಡಿ.20ರಂದು ನಡೆಯಲಿದ್ದು, ಲಾಲೂ ಪ್ರಸಾದ್ ಯಾದವ್ ಅವರುವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕೆಂದು ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.

ಲಾಲೂ ಪ್ರಸಾದ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಮೂರ್ತಿ ಅರುಣ್ ಭಾರದ್ವಾಜ್ ಈ ನಿರ್ದೇಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.