ADVERTISEMENT

ಉತ್ತರ ಪ್ರದೇಶ | ಜಾನುವಾರುಗಳಿಗೆ ಡಿಕ್ಕಿಯಾಗಿ ಬೇರ್ಪಟ್ಟ ಗೂಡ್ಸ್‌ ರೈಲಿನ ಬೋಗಿಗಳು

ಪಿಟಿಐ
Published 10 ಅಕ್ಟೋಬರ್ 2024, 8:42 IST
Last Updated 10 ಅಕ್ಟೋಬರ್ 2024, 8:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗೊಂಡಾ: ಬಿಡಾಡಿ ದನಗಳಿಗೆ ರೈಲಿನ ಎಂಜಿನ್‌‌ ಡಿಕ್ಕಿ ಹೊಡೆದ ಪರಿಣಾಮ ಗೊಂಡಾ–ಬುದ್ವಾಲ್‌ ರೈಲು ಮಾರ್ಗದಲ್ಲಿ ಗೂಡ್ಸ್‌ ರೈಲಿನ ಕೆಲವು ಬೋಗಿಗಳು ಬೇರ್ಪಟ್ಟ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಜಾಪುರ ಮತ್ತು ಕರ್ನಲ್‌ಗಂಜ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಜಾನುವಾರುಗಳಿಗೆ ರೈಲು ಡಿಕ್ಕಿ ಹೊಡೆದ ಕಾರಣ ರೈಲಿನ ಇಂಜಿನ್‌ನ ಹೋಸ್‌ ಪೈಪ್‌ ಅನ್‌ಲಾಕ್‌ ಆಗಿದ್ದು, ಕೆಲವು ಬೋಗಿಗಳು ಬೇರ್ಪಟ್ಟಿವೆ. ಬಿಟ್ಟುಹೋದ ಬೋಗಿಗಳ ಪೈಕಿ ಗಾರ್ಡ್ ಕೋಚ್ ಕೂಡ ಇತ್ತು ಎಂದು ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಗೀರಿಶ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ತಕ್ಷಣವೇ ಸಿಬ್ಬಂದಿ ಮತ್ತು ಗೇಟ್‌ ಮ್ಯಾನ್‌ ಕರ್ನಲ್‌ಗಂಜ್‌ ರೈಲ್ವೆ ನಿಲ್ದಾಣ ಮತ್ತು ರೈಲ್ವೆ ನಿಯಂತ್ರಣ ಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ತಂಡವು ಬೇರ್ಪಟ್ಟ ಬೋಗಿಗಳನ್ನು ಸುಮಾರು ಅರ್ಧ ಗಂಟೆಯಲ್ಲಿ ಸೇರಿಸಿದ್ದು, ಗೂಡ್ಸ್‌ ರೈಲು ಪುನರಾರಂಭಗೊಂಡಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.