ಮುಂಬೈ: ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ಸೇವೆ ಸಲ್ಲಿಸಿದ್ದ ಐಎನ್‌ಎಸ್ ವಿರಾಟ್ ಇನ್ನು ಗುಜರಿಗೆ ಸೇರಲಿದೆ. ಶನಿವಾರ ಗುಜರಾತ್‌ನ ಅಲಾಂಗ್‌ಗೆ ಐಎನ್‌ಎಸ್ ವಿರಾಟ್ ಕೊಂಡೊಯ್ಯಲಾಯಿತು. ಈ ಬೃಹತ್ ನೌಕೆಯನ್ನು ಕಳಚಿ, ಗುಜರಿಯಾಗಿಸುವ ವ್ಯವಸ್ಥೆ ಅಲಾಂಗ್‌ನಲ್ಲಿದ್ದು, ಇಂತಹ ಸೌಲಭ್ಯ ಇರುವ ಜಗತ್ತಿನ ಬೃಹತ್ ಹಡಗುಕಟ್ಟೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಶನಿವಾರ ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ಐಎನ್‌ಎಸ್ ವಿರಾಟ್‌ಗೆ ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಲಾಯಿತು. ನೌಕಾಪಡೆಯ ಅಧಿಕಾರಿಗಳು ಮತ್ತು ಮಾಜಿ ಯೋಧರು ಈ ವಿದಾಯದ ಸಮಾರಂಭಕ್ಕೆ ಸಾಕ್ಷಿಯಾದರು.
ಐಎನ್‌ಎಸ್ ವಿರಾಟ್ ಕುರಿತ ಇನ್ನಷ್ಟು ಸುದ್ದಿಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ: https://www.prajavani.net/tags/ins-viraat
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.